ವಿವಾದಿತ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖಾದರ್!

ಬಂದ್ ಮಾಡುವವರು ಕೇರಳ ಸಿಎಂ ಚಪ್ಪಲಿಗೂ ಸಮಾನರಲ್ಲ ಎಂಬ ಹೇಳಿಕೆ ಹೇಳುವ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ ವಿವಾದವನ್ನು ಸೃಷ್ಟಿಸಿದ್ದರು. ಇದೀಗ ಆ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಮತ್ತೆ ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ಅಚಾತುರ್ಯದಿಂದ ಚಪ್ಪಲಿ ಎಂಬ ಪದ ಬಂದಿದೆ. ನಾನು ಯಾರನ್ನು ಅವಮಾನ, ನೋವು ಮಾಡಲು ಹೇಳಿಕೆ ನೀಡಿಲ್ಲ. ಕ್ಷಮೆ ಕೇಳಲ್ಲ, ಈ ಬಗ್ಗೆ ವಿಷಾದವಿದೆ. ಪಾಕಿಸ್ತಾನ ಪ್ರಧಾನಮಂತ್ರಿ ಬಂದಾಗ ಯಾರು ವಿರೋಧಿಸಿಲ್ಲ. ಹಿರಿಯರು, ದೇಶದ ಏಕೈಕ ಬಿಲ್ಲವ ಸಿಎಂ ಬಂದಾಗ ಕಚೇರಿಗೆ ಬೆಂಕಿ, ಬಸ್ ಗೆ ಕಲ್ಲು ತೂರಾಟ ನಡೆಯಿತು ಎಂದು ತಿಳಿಸಿದರು.

ನನ್ನ ಸಣ್ಣ ಮಗಳು ಕೂಡ ಇದನ್ನು ತಪ್ಪು ಹೇಳಿದ್ದಾಳೆ. ಮುಂದೆ ಈ ರೀತಿ ಮಾತಾಡುವುದಿಲ್ಲ. ಇದನ್ನು ಕೆಲವರು ರಾಜಕೀಯ ಮಾಡುತ್ತಿದ್ದಾರೆ. ವಾಟ್ಸಪ್ ನಲ್ಲಿ ತಿರುಚುತ್ತಿದ್ದಾರೆ. ಸಿಪಿಎಂ ಸೌಹಾರ್ದತೆ ರ್ಯಾಲಿಯ ಘೋಷಣೆ ಸರಿಯಲ್ಲ ಎಂದು ಅವರು ತಿಳಿಸಿದರು.

ಯುಟಿ ಖಾದರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯಿಂದ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಇದು ಸಂವಿಧಾನ ವಿರೋಧಿಗಳ  ಹೇಳಿಕೆ ಎಂದಿದ್ದಾರೆ.

Comments are closed.