ಕೊರೊನ ಬಗ್ಗೆ ಹುಟ್ಟಿದ ಈ ಮೂರು ಸುಳ್ ಸುದ್ದಿಗಳ ಬಗ್ಗೆ ತಿಳಿದಿರಲಿ

ವಿಶ್ವದಲ್ಲಿ ಕೊರ್ೊ ಸೋಂಕು ವಿಶ್ವದಾದ್ಯಂತ ವೇಗವಾಗಿ ಹರಡುತ್ತಿರುವ ಸಮಯದಲ್ಲಿಯೇ ಕೊರೊನ ಬಗ್ಗೆ ಸುಳ್ಳು ಸುದ್ದಿಗಳು ಅಷ್ಟೇ ವೇಗವಾಗಿ ಹರಡುತ್ತಿವೆ. ಈ ಕೆಲವು ಸುಳ್ಳು ಸುದ್ದಿಗಳ ಬಗ್ಗೆ ನಿಮಗೆ ತಿಳಿದಿರಲಿ.

ಕೊರೊನ ವೈರಸ್ ಪ್ರಯೋಗಾಲಯದಲ್ಲಿ ಹುಟ್ಟಿಸಿದ್ದೆಂದು ಚೈನಾ ಅಧಿಕಾರಿ ಒಪ್ಪಿಕೊಂಡಿದ್ದಾರೆ

ವಾಟ್ಸ್ ಆಪ್ ವಿಶ್ವವಿದ್ಯಾಲಯದಲ್ಲಿ ಹರಿದಾಡುತ್ತಿದ್ದ ಒಂದು ಲಿಂಕ್ ಜಾಡು ಹಿಡಿದು ಸುಳ್ಳು ಪತ್ತೆ ಹಚ್ಚಿರುವ ಕ್ವಿಂಟ್ ಅಂತರ್ಜಾಲ ಪತ್ರಿಕೆ, ಇದು ಹಿಂದೆ ಒಂದೆರಡು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಲೇಖನ ಮತ್ತು Reditನಲ್ಲಿ ಪ್ರಕಟವಾಗುವ ಲೇಖನಗಳು ಸಾಮಾನ್ಯವಾಗಿ ಕಟ್ಟುಕಥೆಗಳು ಎಂದು ಹೇಳಿದೆ.

ಧಾರ್ಮಿಕ ಕಾರಣ ಕೊಟ್ಟು ಭಟ್ಕಳದಲ್ಲಿ ಕೊರೊನ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದ ಮುಸ್ಲಿಮರು

ದುಬೈನಿಂದ ಭಟ್ಕಳಕ್ಕೆ ಹಿಂದಿರುಗಿದ್ದ ಕೆಲವರು ಧಾರ್ಮಿಕ ಕಾರಣ ಕೊಟ್ಟು ಕೊರೊನ ಸೋಂಕು ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಕನ್ನಡದ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಸುದ್ದಿ ಮಾಡಿತ್ತು. ಇದನ್ನೇ ತೆಗೆದುಕೊಂದು ಕೊರೊನ ಪರೀಕ್ಷೆಗೆ ಇಸ್ಲಾಂನಲ್ಲಿ ಅವಕಾಶ ಇಲ್ಲ ಎಂದು ನಾಲ್ವರು ಮುಸ್ಲಿಮರು ಆರೋಗ್ಯ ಅಧಿಕಾರಿಗಳನ್ನು ಬೆದರಿಸಿದ್ದಾರೆ ಎಂದು opindia ವರದಿ ಮಾಡಿತ್ತು. ಇದರ ಬೆನ್ನು ಬಿದ್ದಿದ್ದ ಕ್ವಿಂಟ್ ಅಂತರ್ಜಾಲ ಪತ್ರಿಕೆ, ಉತ್ತರ ಕನ್ನಡ ಉಪ ಕಮಿಶನರ್ ಹರೀಶ್ ಕುಮಾರ್ ಜೊತೆಗೆ ಮಾತನಾಡಿ ಪಬ್ಲಿಕ್ ಟಿವಿ ಮತ್ತು opindiaದ ವರದಿಗಳು ಸಂಪೂರ್ಣ ಸುಳ್ಳು ಎಂದು ಪತ್ತೆ ಹಚ್ಚಿದೆ.

ಸ್ವಿಸ್ ಡ್ರಗ್ ಸಂಸ್ಥೆ ಕೊರೊನ ವೈರಸ್ ಗೆ ಲಸಿಕೆ ಕಂಡುಹಿಡಿದಿರುವುದನ್ನು ಘೋಷಿಸಿದ ಟ್ರಂಪ್

ಅಮೆರಿಕಾದ ರಾಷ್ಟ್ರಾಧ್ಯಕ್ಷ ಕೊರೊನ ಸೋಂಕಿಗೆ ಸ್ವಿಸ್ ದೇಶದ ಔಷಧ ಉತ್ಪಾದನ ಸಂಸ್ಥೆ ರೋಶೆ ಲಸಿಕೆ ಕಂಡು ಹಿಡಿದಿದೆ ಎಂದು ಹೇಳಿದ್ದಾರೆ ಎಂದು ತಿಳಿಸುವ 37 ಸೆಕಂಡುಗಳ ಚಿಕ್ಕ ವಿಡೀಯೋ ವೈರಲ್ ಆಗಿತ್ತು.

ಇದು ಸಂಪೂರ್ಣ ವಿಡಿಯೋವನ್ನು ಕತ್ತರಿಸಿ ತಿರುಚಿ ಸುಳ್ಳು ವೈರಲ್ ವಿಡಿಯೋ ಸೃಷ್ಟಿ ಮಾಡಿದ್ದಾರೆ ಎಂದು ಆ ಡ್ರಗ್ ಸಂಸ್ಥೆಯ ಅಧಿಕಾರಿಗಳೊಬ್ಬರು ತಿಳಿಸಿರುವುದನ್ನು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಕೊರೊನ ಸೋಂಕಿಗೆ ಲಸಿಕೆ ಅನ್ವೇಷಣೆ ಜಾರಿಯಲ್ಲಿದ್ದು, ಇದಕ್ಕೆ ಕನಿಷ್ಟ ಒಂದು ವರ್ಷದ ಸಮಯವಾದರೂ ಬೇಕು ಎಂಬುದು ತಜ್ಞರ ಅಭಿಪ್ರಾಯ.