KRS ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ…

ಇಂದು ಸಾಂಸ್ಕೃತ ನಗರಿ ಮೈಸೂರಿಗೆ ಸಿಎಂ ಭೇಟಿ ನೀಡಿ KRS ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ. ನಾರಾಯಣಗೌಡ ಅಭಿಮಾನಿಗಳಿಂದ ಸಿಎಂಗೆ ಬೃಹತ್ ಹಾರ ಹಾಕಿ ಸ್ವಾಗತಿಸಲಾಯಿತು.

ಸಿಎಂ ಆಗಿ 4ನೇ ಬಾರಿಗೆ ಬಿಎಸ್ ವೈ ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಿದರು. ಈ ಹಿಂದೆ 2008ರಿಂದ ಸತತವಾಗಿ ಮೂರು ಬಾರಿ ಬಾಗಿನ ಅರ್ಪಿಸಿದ್ದ ಯಡಿಯೂರಪ್ಪ, ವೇದ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ತಂಡದ ನೇತೃತ್ವದಲ್ಲಿ ಬಾಗಿನ ನೀಡಿದರು. ಬಳಿಕ ಕಾವೇರಿ ಮಾತಿಗೆ ಸಿಎಂ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು ಕೆ.ಆರ್.ಎಸ್. ಅಭಿವೃದ್ದಿಗೆ ಹಣದ ಕೊರತೆ ಇಲ್ಲ. ಸಮಗ್ರ ಅಭಿವೃದ್ದಿಗಾಗಿ ಯೋಜನೆ ತಯಾರಿಸಿ ಸರ್ಕಾರ ಕಳುಹಿಸಿ, ಯೋಜನೆಗೆ ಬೇಕಾದ ಅನುದಾನ‌ ಬಿಡುಗಡೆ ಮಾಡಲು ಅಗತ್ಯ ನೆರವು ನೀಡಲು ಮತ್ತು ಕೆ.ಆರ್.ಎಸ್ . ನ ಪ್ರವಾಸಿ ತಾಣವಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಇದೇ ವೇಳೆ ಜಿಲ್ಲೆಯಲ್ಲಿನ ಸ್ಥಗಿತವಾಗಿರುವ ಎರಡು ಕಾರ್ಖಾನೆ ಪುನರಾಂಭಕ್ಕೆ ಪ್ರಾಮಾಣಿಕ ಪ್ರಯತ್ನಮಾಡುತ್ತೇನೆ. ಯಾವುದೇ ಕಾರಣಕ್ಕೂ ಸ್ಥಗಿತವಾಗಿರೋ ಆ ಕಾರ್ಖಾನೆಗಳನ್ನು ಮುಚ್ಚಲು ಬಿಡಲ್ಲ‌. ಇದಕ್ಕಾಗಿ ನಾನು ಮತ್ತು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ ಎಂದರು.

ಸಿಎಂಗೆ ಸಚಿವರಾದ ಆರ್.ಅಶೋಕ್, ಸಂಸದರಾದ ಸುಮಲತಾ, ಪ್ರತಾಪ್ ಸಿಂಹ, ಶಾಸಕರಾದ ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಮಂಡ್ಯ, ಮೈಸೂರು ಜಿಲ್ಲೆಯ ಶಾಸಕರು ಭಾಗಿಯಾಗಿದ್ದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights