KRS ಡ್ಯಾಂ ತುಂಬಿದ್ರು ಜಿಲ್ಲೆಯ ಕೆರೆಗಳು ಖಾಲಿ ಖಾಲಿ : ತಮಿಳುನಾಡಿಗೆ ನಿರಂತರ ನೀರು – ಅನ್ನದಾತರ ಆಕ್ರೋಶ

ಈ ಬಾರಿ ವರುಣನ ಕೃಪೆಯಿಂದ ಸಕ್ಕರೆನಾಡು ಮಂಡ್ಯ‌ದ krs ಹಾಗೂ ಹಾಸನ ಹೇಮಾವತಿ ಡ್ಯಾಂಗಳು ಭರ್ತಿಯಾಗಿವೆ. ಇಷ್ಟಾದ್ರು ಸಕ್ಕರೆನಾಡು ಮಂಡ್ಯ ರೈತರ ಸಂಕಷ್ಟ ಮಾತ್ರ ತೀರಿಲ್ಲ. ಎರಡು ಜಲಾಶಯಗಳು ತುಂಬಿದ್ರು ಜಿಲ್ಲೆಯಲ್ಲಿನ ಬಹುತೇಕ‌ ಕೆರೆ ಕಟ್ಟೆಗಳು ಖಾಲಿ ಖಾಲಿ ಇವೆ. ಜಿಲ್ಲೆಯಲ್ಲಿನ ಕೆರೆ ಕಟ್ಟೆಗಳನ್ನು ತುಂಬಿಸದೆ ಸರ್ಕಾರ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸ್ತಿರೋದು ಮಂಡ್ಯ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು,ಮೊದ್ಲು ಜಿಲ್ಲೆಯಲ್ಲಿರೋ ಕೆರೆಕಟ್ಟೆಗಳನ್ನು ತುಂಬಿಸುವಂತೆ ಸರ್ಕಾರವನ್ನು ಒತ್ತಾಯಿಸ್ತಿದ್ದಾರೆ‌.

ಹೌದು ! ಹೀಗೇ ಒಂದು ಕಡೆ ನೀರಿನಿಂದ ತುಂಬಿ ಥುಳುಕ್ತಿರೋ ಜಲಾಶಯ.ಮತ್ತೊಂದು ಕಡೆ ನೀರಿಲ್ಲದೆ ಖಾಲಿಯಾಗಿರೋ ಕೆರೆಗಳು. ಈ ಎಲ್ಲಾ ದೃಶ್ಯ‌ ಕಂಡು ಬಂದಿದ್ದು,ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ. ಈ ಬಾರಿ ವರುಣನ ಕೃಪೆಯಿಂದ ಜಿಲ್ಲೆಯ‌ ಕೆ.ಆರ್.ಎಸ್. ಹಾಗು ಪಕ್ಜದ ಜಿಲ್ಲೆಯ ಹೇಮಾವತಿ ಡ್ಯಾಂ ಭರ್ತಿಯಾಗಿದೆ. ಎರಡು ಜಲಾಶಯಗಳು ನೀರಿನಿಂದ ಸಂಪೂರ್ಣ ಭರ್ತಿಯಾಗಿದ್ರು ಅದೇಕೋ ಜಿಲ್ಲೆಯ ರೈತರ ಸಂಕಷ್ಟ‌ ಮಾತ್ರ ತೀರಿಲ್ಲ. ಕೆ.ಆರ್.ಎಸ್. ಮತ್ತು‌ ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಯುತ್ತಿದ್ದು ಜಿಲ್ಲೆಯಲ್ಲಿ ಬಹುತೇಕ ಕೆರಕಟ್ಟೆಗಳು ನೀರಿಲ್ಲದೆ ಖಾಲಿ ಖಾಲಿ ಯಾಗಿವೆ. ಅತಿ ಹೆಚ್ಚು ಕೆರೆಗಳಿರುವ ನಾಗಮಂಗಲ ಕೆ.ಆರ್.ಪೇಟೆ,ಮಳವಳ್ಳಿ ತಾಲೂಕಿನ ಕೆರೆಗಳು ಖಾಲಿಯಾಗಿದ್ದು ಮಳೆಯಾಗಿ ಜಲಾಶಯ ತುಂಬಿದ್ರು ಕೆರೆಗೆ ನೀರು ಹರಿಸದೆ ಇರೋದು ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ಮಾತ್ರ ನಿರಂತರ ನೀರು ಹರಿಸ್ತಿರೋದನ್ನ ನಿಲ್ಲಿಸಿ ಜಿಲ್ಲೆಯಲ್ಲಿರೋ ಕೆರೆ ಕಟ್ಟೆಗಳನ್ನು ತುಂಬಿಸುವಂತೆ ಜಿಲ್ಲೆಯ ರೈತರು ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಆಗ್ರಹಿಸಿದ್ದಾರೆ.

ಇನ್ನು ಜಿಲ್ಲೆಯಲ್ಲಿನ ರೈತರ ಸಂಕಷ್ಟಕ್ಕೆ ಜನಪ್ರತಿನಿಧಿಗಳಾಗಲಿ ಸರ್ಕಾರವಾಗ್ಲಿ ಸ್ಪಂದಿಸ್ತಿಲ್ಲ‌ ಅನ್ನೋದು ಜಿಲ್ಲೆಯ ರೈತರ ನೇರ ಆರೋಪ. ಈ ಬಾರಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿದ್ರು‌ ಕೆರೆ ತುಂಬಿಸುವ ಕಾರ್ಯ ೧೦ % ಸಹ ಆಗ್ತಿಲ್ಲ ಅನ್ನೋದ್ನ ಜಿಲ್ಲೆಯ ಶಾಸಕರೇ ಒಪ್ಪಿಕೊಳ್ತಿದ್ದಾರೆ. ಇನ್ನು ಇದಕ್ಕೆ ತಮ್ಮದೆ ಆದ ವ್ಯಾಖ್ಯಾನ ನೀಡ್ತಿದ್ದಾರೆ‌. ನಾಗಮಂಗಲದ ಜೆಡಿಎಸ್ ಶಾಸಕ ಕೆರೆಗಳನ್ನು ತುಂಬಿಸಲು ನಮ್ಮಲ್ಲಿ ಸರಿಯಾದ ಇನ್ಫ್ರಾಸ್ಟಕ್ಚರ್ ಇಲ್ಲ ಅಂದ್ರೆ,ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಈಗ ಎಲ್ಲಾವು ಕೇಂದ್ರದ ಕೈಲಿದೆ. ಕಾವೇರಿ ಪ್ರಾಧಿಕಾರದ ಮೇಲೆ ಸರ್ಕಾರ ಮತ್ತು ಸಂಸದರು ಒತ್ತಡ ಹಾಕಿ‌ ಜಿಲ್ಲೆಯ ಕೆರೆ ಕಟ್ಟೆಗಳನ್ನು ತುಂಬಿಸಲಿ ಅಂತಿದ್ದಾರೆ.

ಒಟ್ಟಾರೆ ಈ ಬಾರಿ ಕೆ.ಆರ್.‌ಎಸ್ ಮತ್ತು ಹೇಮಾವತಿ ಜಲಾಶಯಗಳು ತುಂಬಿದ್ರು ಅದೇಕೋ ಜಿಲ್ಲೆಯ ಕೆರೆ ಕಟ್ಟೆಗಳನ್ನು ಮಾತ್ರ ತುಂಬಿಸದೆ ಸರ್ಕಾರ ನಿರ್ಲಕ್ಷ್ಯ ವಹಿಸ್ತಿದೆ. ಇನ್ನಾದ್ರು ಸರ್ಕಾರ ಎಚ್ಚೆತ್ತು ಜಿಲ್ಲೆಯ ಕೆರೆಕಟ್ಟೆಗಳನ್ನು ತುಂಬಿಸಿ ಜಿಲ್ಲೆಯ ರೈತರ ಹಿತ ಕಾಯಬೇಕಿದ್ದು ಇಲ್ದಿದ್ರೆ ಸಕ್ಕರೆನಾಡು ಮುಂದಿನ ದಿನಗಳಲ್ಲಿ ಮತ್ತಷ್ಟು ರೈತರ ಆತ್ಮಹತ್ಯೆ ಗೆ ಕಾರಣವಾಗಬೇಕಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights