ಲಡಾಕಿನ ಖರ್ದುಂಗ್ : ಹಿಮದಡಿ ಸಿಲುಕಿ ಮೂವರು ಸಾವು – 10 ಮಂದಿಯ ರಕ್ಷಣಾ ಕಾರ್ಯ

ಹೇಳಿ ಕೇಳಿ ಇದು ಚಳಿಗಾಲ. ಬೆಂಗಳೂರಿನ ಮಂದಿಗೆ ಈ ಚಳಿಯನ್ನ ಸಹಿಸಿಕೊಳ್ಳೂದಕ್ಕೆ ಆಗ್ತಾಯಿಲ್ಲ. ಇನ್ನೂ ಹಿಮ ಬೀಳುವ ಪ್ರದೇಶಗಳಲ್ಲಿ ವಾಸ ಮಾಡುವ ಜನರ ಸ್ಥಿತಿ ಹೇಗಿರಬೇಡ..? ಕೊರೆಯುವ ಚಳಿಯನ್ನ ನೆಸಿಕೊಂಡು ಹಿಮವನ್ನ ನೆನೆಸಿಕೊಂಡರೆ ಹೃದಯ ಅಲುಗಾಡಿ ಹೋಗುತ್ತೆ. ಮಳೆಯಂತೆ ಬೆಂಬಿಡದೆ ಬೀಳುವ ಹಿಮಕ್ಕೆ ಶುಕ್ರವಾರ ಮೂರು ಜನ ಬಲಿಯಾಗಿದ್ದಾರೆ. ಇನ್ನೂ 10 ಜನ ಹಿಮದಡಿ ಸಿಲುಕಿಕೊಂಡಿದ್ದಾರೆ ಲಡಾಕ್ ನಲ್ಲಿ.

ಹೌದು.. ಲಡಾಕಿನ ಖರ್ದುಂಗ್ ಲಾ ಪಾಸ್ ನಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಹಿಮಪಾತದಲ್ಲಿ 10 ಜನ ಹಿಮದಡಿ ಸಿಲುಕಿಕೊಂಡಿದ್ದು, ಮೂವರು ಸಾವಿಗೀಡಾಗಿದ್ದಾರೆ. ಹಿಮದಡಿಯಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಗುರುವಾರವೇ ಕಾಶ್ಮೀರದ 9 ಜಿಲ್ಲೆಗಳಿಗೆ ಹಿಮಪಾತವಾಗುವ ಸಂಭವವಿದೆ ಎಂದು ಮೊದಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಅನಂತ್ ನಾಗ್, ಬುದ್ಗಾಮ್, ಬಾರಮುಲ್ಲಾ, ಬಂಡಿಪೊರ, ಗಂಡೆರಬಲ್, ಕಾರ್ಗಿಲ್, ಕುಲ್ಗಾಮ್, ಕುಪ್ವಾರ ಮತ್ತು ಲೇಹ್ ಗಳಲ್ಲಿ ಹಿಮಪಾತ ಸಂಭವಿಸುವ ಸಂಭವವಿದೆ ಎಂದು ಮುನ್ನಚ್ಚರಿಕೆ ನೀಡಲಾಗಿತ್ತು.

ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹಿಮಮಳೆ ಬೀಳುತ್ತಲೇ ಇದೆ. ಹಿಮದಡಿ ಸಿಲುಕಿಕೊಂಡ ಹತ್ತು ಜನರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply