ಲಾಲೂ ಪ್ರಸಾದ್ ಆರೋಗ್ಯದಲ್ಲಿ ಏರುಪೇರು – ರಿಮ್ಸ್ ಆಸ್ಪತ್ರೆಗೆ ದಾಖಲು

ರಾಂಚಿ, ಜ.2(ಯುಎನ್ಐ)- ಆರ್ ಜೆಡಿ ಮುಖ್ಯಸ್ಥ ಬಿಹಾರ್ದ ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್ ಅವರಿಗೆ ಮೂತ್ರದ ಸೊಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಜೈಲಿನಿಂದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂತ್ರ ಪರೀಕ್ಷೆಯಲ್ಲಿ ರಕ್ತದ ಕಲೆ ಕಂಡು ಬಂದಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಲಾಲು ಪ್ರಸಾದ್ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯ ಡಾ.ಉಮೇಶ್ ಪ್ರಸಾದ್, ಸೊಂಕು ಹೆಚ್ಚಾಗಿದೆ.

ಇನ್ನೊಂದು ಮೂತ್ರ ಪರೀಕ್ಷೆ ವರದಿ ಬರುವುದಿದ್ದು ಬಳಿಕವೇ, ರೋಗದ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ ಎಂದಿದ್ದಾರೆ. ಲಾಲು ಪ್ರಸಾದ್ ಮೂತ್ರ ಪಿಂಡದ ವೈಫಲ್ಯ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸದ್ಯ ಇವರ ಕಿಡ್ನಿ ಶೇ.45 ರಷ್ಟು ಕೆಲಸ ಮಾಡುತ್ತಿದೆ. ಅವರ ಆರೋಗ್ಯದ ಮೇಲೆ ನಿಗಾ ಇಟ್ಟುಕೊಳ್ಳ ಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಲಾಲು ಪ್ರಸಾದ್ ಅವರ ಪತ್ನಿ ಅವರಿಗೆ ಹೊರಗಿನ ಊಟ ನೀಡಲು ಜೈಲು ಅಧಿಕಾರಿ  ಪರವಾನಿಗೆ ನೀಡಿದ್ದಾರೆ. ಊಟದಲ್ಲಿ ಶಾಖಹಾರ ಭೋಜನಕ್ಕೆ ಆದ್ಯತೆ ನೀಡಲಾಗಿದೆ.

Leave a Reply