OMG : ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆ ಬಿದ್ದಿದ್ದು ಇಲ್ಲಿ….

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಮನೆ ಬಾವಿಗೆ ಬಿದ್ದು ತನ್ನ ಪ್ರಾಣಕ್ಕೇನೆ ಸಂಚಕಾರ ತಂದು ಕೊಂಡ ಘಟನೆ ಇವತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿಯಲ್ಲಿ‌ ನಡೆದಿದೆ..

ಇಲ್ಲಿನ‌ ವಸಂತ್ ನಾಯ್ಕ್ ಎಂಬುವರ ಮನೆಯ ಬಾವಿಯಲ್ಲಿ ಚಿರಯೆ ಬಿದ್ದಿದ್ದು ಚಿರತೆ ಮೇಲೆತ್ತು ಪ್ರಯತ್ನ ಕಾರ್ಯಚರಣೆ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ‌ ನಡೆಯುತ್ತಿದೆ..ಮನೆಯವರು ಮುಂಜಾನೆ ಬಾವಿಯಿಂದ ನೀರು ಸೇದಲು ಬಂದ ಸಂದರ್ಭದಲ್ಲಿ ಬಾವಿಗೆ ಚಿರತೆ ಬಿದ್ದ ವಿಚಾರ ಗೊತ್ತಾಗಿದೆ…

ಚಿರತೆ ನೋಡಿದ ಮನೆಯವರು ಹೌ ಹಾರಿ ಸುತ್ತಮುತ್ತಲಿನ‌ ಜನರಿಗೆ ತಿಳಿಸಿದ್ದಾರೆ ಕೂಡಲೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆ ರಕ್ಷಣಾ ಕಾರ್ಯ ಕೈ ಗೊಂಡಿದ್ದಾರೆ..ಬಳಿಕ ಚಿರತೆ ಬಾವಿಗೆ ಬಿದ್ದ ಸುದ್ದಿ ತಿಳಿದು ಊರುಕೇರಿ ಜನ ಒಂದಾಗಿ ಚಿರತೆ ನೋಡಲು ಬಾವಿಯತ್ತ ಧಾವಿಸಿ ಬಂದ್ರು…