ಕಪಾಲ ಬೆಟ್ಟದಲ್ಲಿ ಕಲ್ಲಡ್ಕ ಪ್ರಭಾಕರ್ ಕೃಷ್ಣನ ಪ್ರತಿಮೆ ನಿರ್ಮಿಸಲಿ- ಐವಾನ್ ಡಿಸೋಜ

ಕಪಾಲ ಬೆಟ್ಟದಲ್ಲಿ ಕಲ್ಲಡ್ಕ ಪ್ರಭಾಕರ್ ಬೆಟ್ಟದಲ್ಲಿ ಬೇಕಾದರೆ ಕೃಷ್ಣನ ಪ್ರತಿಮೆ ನಿರ್ಮಿಸಲಿ ಎಂದು ಕಾಂಗ್ರಸ್ ಮುಖಂಡ ಐವಾನ್ ಡಿಸೋಜ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಧಾರ್ಮಿಕ ನಾಯಕರ ಪ್ರತಿಮೆ ನಿರ್ಮಿಸಲು ಹಕ್ಕಿದೆ. ಕಲ್ಲಡ್ಕದಲ್ಲಿ ಅವರು ಬೇಕಾದರೆ ಕೃಷ್ಣನ ಪ್ರತಿಮೆ ನಿರ್ಮಿಸಿದರೆ ನಾವು ನೆರವು ನೀಡುತ್ತೇವೆ ಎಂದರು.

ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ಕಾರ‌ ಕಾನೂನಾತ್ಮಾಕವಾಗಿಯೇ ಗೋಮಾಳ ಭೂಮಿ ಮಂಜೂರು ಮಾಡಿದೆ.10 ಎಕರೆ ಭೂಮಿಯನ್ನು 2018 ರ ಫೆಬ್ರವರಿ 2 ರಂದು ಸರ್ಕಾರ ಮಂಜೂರು ಮಾಡಲಾಗಿದೆ. ಧಾರ್ಮಿಕ‌ ಮತ್ತು ಸಾಮಾಜಿಕ ಚಟುವಟಿಕೆ ನಡೆಸಲು ಭೂಮಿ ಮಂಜೂರು ಮಾಡಲಾಗಿತ್ತು. ನ್ಯಾಯವಾಗಿ ಮಂಜೂರಾದ ಭೂಮಿ ವಾಪಸ್ ಪಡೆಯಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು, ಸತ್ಯ ಶೋಧನಾ ಸಮಿತಿ ಪ್ರಕರಣ ಸಂಬಂಧ ವರದಿ ಸಿದ್ಧಪಡಿಸಿದೆ ಎಂದು ವಾಸ್ತವ ಸ್ಥಿತಿ ಅರಿಯಲು ಕ್ರಿಸ್ಚಿಯನ್ ಸಮುದಾಯದ ಮುಖಂಡರ ಸತ್ಯ ಶೋಧನಾ ಸಮಿತಿ ರಚಿಸಲಾಗಿತ್ತು,ಈ ವರದಿಯನ್ನು ಸಿಎಂ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್ ಅಶೋಕ್ ಗೆ ಸಲ್ಲಿಸ್ತೇವೆ.ಕಪಾಲ ಬೆಟ್ಟದಲ್ಲಿ 10 ಎಕರೆ ಭೂಮಿ ಸರ್ಕಾರದಿಂದ ಮಂಜೂರಾಗಿತ್ತು.ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಅಧಿಕೃತವಾಗಿ ಮಂಜೂರು ಮಾಡಲಾಗಿತ್ತು.ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಭೂಮಿ ಮಂಜೂರು ಮಾಡಲಾಗಿದೆ ಎಂದರು.