ಲೋಕಸಭಾ ಚುನಾವಣೆ ಕಟ್ಟೆಚ್ಚರ : 50,000ಕ್ಕಿಂತ ಹೆಚ್ಚು ಹಣ ಸಾಗಿಸುವಂತಿಲ್ಲ – ಸಂಜೀವ್ ಕುಮಾರ್

ಲೋಕಸಭಾ ಚುನಾವಣೆ ದಿನಾಂಕ ನಿಗಧಿಯಾದ ಬೆನ್ನೆಲ್ಲೆ ಹಣದ ವೈಹಿವಾಟು ವ್ಯವಹಾರಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ಸಾರ್ವಜನಿಕರು 50,000ಕ್ಕಿಂತ ಹೆಚ್ಚು ಹಣ ಸಾಗಿಸುವಂತಿಲ್ಲ, ಅಧಿಕ ಬೆಲೆ ಬಾಳುವ ಗಿಫ್ಟ್ ಅಥವಾ ವಸ್ತುಗಳನ್ನು ನೀಡುವಂತಿಲ್ಲ ಜೊತೆಗೆ ಕೊಂಡೋಯ್ಯುವಂತಿಲ್ಲ. ಒಂದು ವೇಳೆ ಅಧಿಕ ಹಣ ಅಥವಾ ಬೆಲೆಬಾಳು ವಸ್ತುಗಳು ವರ್ಗಾವಣೆಗೆ ಅಗತ್ಯ ದಾಖಲೆಗಳನ್ನು ನೀಡಬೇಕು.

ಒಂದೇ ಖಾತೆಯಿಂದ ಅಧಿಕ ಹಣ ವರ್ಗಾವಣೆಯಾದರೆ ಈ ಬಗ್ಗೆ ಡಿಸಿ ಪರಿಶೀಲನೆ ಮಾಡ್ತಾರೆ. ಬ್ಯಾಂಕುಗಳು ಪಾಲಿಸಬೇಕು. ಇಲ್ಲವಾದರೆ ಜಪ್ತಿ ಮಾಡಬೇಕಾಗುತ್ತದೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮಗಳು, ಹುಟ್ಟು ಹಬ್ಬ, ಊಟದ ಹೆಸರಲ್ಲಿ ಆಮೀಷ ಒಡ್ಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾರ್ಯಕ್ರಮಗಳನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳಬಾರದು. ಚುನಾವಣೆ ಮುಗಿಯುವವರೆಗೂ ಖಾಸಗಿ ಕಾರ್ಯಕ್ರಮಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ಬೇಡ ಎಂದು ಹೇಳಿದ್ದಾರೆ.

 

 

Leave a Reply

Your email address will not be published.