ಲಾಕ್ ಡೌನ್ ನಿಂದ ಅತೀ ಹೆಚ್ಚು ತೊಂದರೆಗೀಡಾದವರು ಇವರೇ ನೋಡಿ….

ದೇಶದಲ್ಲಿ ಲಾಕ್ ಡೌನ್ ಆದಾಗಿನಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜನ ಮನೆ ಬಿಟ್ಟು ಹೊರಬರಲು ದೇಶದೆಲ್ಲೆಡೆ 144 ಸೆಕ್ಸನ್ ಜಾರಿ ಮಾಡಲಾಗಿದೆ. ಇದರಿಂದ ಜನ ಅಗತ್ಯ ವಸ್ತುಗಳನ್ನೂ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇಲ್ಲಿ ಒಂದು ವಿಚಾರವನ್ನ ನಾವು ಗಮನಿಸಲೇಬೇಕು. ಈ ಲಾಕ್ ಡೌನ್ ನಿಂದ ಯಾರಿಗೆ ಅಧಿಕ ತೊಂದರೆಯಾಗಿದೆ ಗೊತ್ತಾ..?ಅದನ್ನ ನೋಡ್ತಾ ಹೋಗೋಣ….

ಕೂಲಿ ಕಾರ್ಮಿಕರು –

ದಿನದ ಒಂದು ಹೊತ್ತಿನ ಊಟಕ್ಕಾಗಿ ದುಡಿಯುವ ಜನ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಕಾರ್ಮಿಕರಿಗೆ ಆ ದಿನ ಕೆಲಸ ಮಾಡಿದ್ರೆ ಮಾತ್ರ ಹಣ. ಆ ಹಣದಲ್ಲೇ ಅವರು ಜೀವನ ನಡೆಸಬೇಕು. ಹೀಗಿರುವಾಗ ಕೂಲಿ ಕಾರ್ಮಿಕರಿಗೆ ಕೆಲಸವೂ ಇಲ್ಲ. ಕೂಲಿ ಕೂಡ ಇತ್ತ ಮನೆ ಕಡೆಗೆತೆರಳಲು ಅವಕಾಶವೂ ಕೂಡ ಇಲ್ಲ. ಹೀಗಾಗಿ ದಿನದ ಊಟಕ್ಕೂ ಕೂಲಿ ಆಳುಗಳು ಕಷ್ಟಪಡುವಂತಾಗಿದೆ.

ಉದ್ಯೋಗ ಅರಸಿ ಬಂದವರು –

ಉದ್ಯೂಗ ಅರಸಿ ಊರು ಬಿಟ್ಟು ಊರಿಗೆ ಬರುವ ಯುವಕ ಯುವತಿಯರಿಗೆ ಲಾಕ್ ಡೌನ್ ಎಫೆಕ್ಟ್ ತುಂಬಾನೇ ತಟ್ಟಿದೆ. ಹೌದು… ಬಹುತೇಕ ನಿರುದ್ಯೋಗಿಗಳು ತಮ್ಮ ಊರುಗಳನ್ನ ಬಿಟ್ಟು ಬರುವಾಗ ತಮಗಿಂತ ಸ್ಥಿತಿ ಬರುತ್ತೆ ಅನ್ನೋ ಕಲ್ಪನೆ ಮಾಡಿಕೊಂಡಿರುವುದಿಲ್ಲ. ಅವರೂ ಊಟ ಮಾಡುವುದು ಹೊರಗಡೆ, ಕುಡಿಯುವ ನೀರು ತರಿಸಿಕೊಳ್ಳುವು ಹೊರಗಡೆ ಬಹುತೇಕ ಅವರ ಜೀವನ ನಡೆಯುವುದು ಹೊರಗಡೆ ಊಟದ ಮೇಲೆ ಅವಲಂಬಿತರಾಗಿರುತ್ತದೆ. ಹೀಗೆ ಏಕಾಏಕಿ ಹೋಟೆಲ್ ಹಾಗೂ ಪಾರ್ಸಲ್ ತರಿಸಿಕೊಳ್ಳುವ ವ್ಯವಸ್ಥೆ ಬಂದ್ ಆದ ಪರಿಣಾಮ ಹಣವಿದ್ದು ಊಟ ಮಾಡಲು ಕಷ್ಟ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ತಮ್ಮ ಊರುಗಳಿಗೆ ತೆರಳಲೂ ಬಸ್ ಇಲ್ಲ, ಖಾಸಗೀ ಬಸ್ ಗಳಲ್ಲಿ ದುಪ್ಪಟ್ಟು ಹಣ ಕೇಳ್ತಾರೆ. ಹೀಗಾಗಿ ಲಾಕ್ ಡೌನ್ ಉದ್ಯೋಗ ಅರಸಿ ಬಂದವರಿಗೆ ನುಂಗಲಾರದ ತುತ್ತಾಗಿದೆ.

ಬೀದಿ ಬದಿ ವ್ಯಾಪಾರಿಗಳು –

ಇನ್ನೂ ಬೀದಿ ಬದಿ ವ್ಯಾಪಾರಿಗಳ ಅವಸ್ಥ ಅಂತೋ ಹೇಳೋ ಹಾಗೇ ಇಲ್ಗ. ಜನ ಯಾವುದನ್ನ ಖರೀದಿ ಮಾಡ್ತಾರೋ..? ಯಾವುದನ್ನ ಬಿಡ್ತಾರೋ..? ಒಂದು ವೇಳೆ ಖರೀದಿಗೆ ಬಂದ್ರೆ ಪೊಲೀಸರು ತಡಿತಾರೋ..? ಹೀಗೆ ಗೊಂದಲದಲ್ಲಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ತರಕಾರಿ, ಹಣ್ಣು, ತರಕಾರಿ ಇನ್ನಿತರ ಸಾಮಾಗ್ರಿಗಳನ್ನು ಮಾರಾಟ ಆಗುತ್ತಾ ಅನ್ನೋ ಗೊಂದಲದಲ್ಲಿ ವ್ಯಾಪಾರ ಇಲ್ದೆ ದುಡಿಮೆ ಇಲ್ದೆ ಕೊರೊನಾ ಸಂಕಷ್ಟದಿಂದ ದೂರ ಮಾಡಲು ದೇವರಲ್ಲಿ ಪ್ರಾರ್ಥನೆ ಮಾಡುವಂತ ಸ್ಥಿತಿ ಅವರದ್ದು.

ಆಟೋ, ಟ್ಯಾಕ್ಸಿ, ಖಾಸಗೀ ವಾಹನ ಚಾಲಕರು –

ಎಸ್… ಆಟೋ, ಟ್ಯಾಕ್ಸಿ, ಖಾಸಗೀ ವಾಹನಗಳ ಸಂಕಷ್ಟ ಹೇಳೋ ಹಾಗೇ ಇಲ್ಲ ಬಿಡಿ. ಯಾಂಕದರೆ ಈ ಹಿಂದೆ ಮೆಟ್ರೋ, ರೈಲ್ವೇ ಸ್ಟೇಷನ್, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಬಸ್ ಸ್ಟಾಪ್ ಗಳಲ್ಲಿ ನಿಂತು ಪ್ರಯಾಣಿಕರನ್ನು ಕರೆದೊಯ್ಯುವ ಕೆಲಸ ವಾಹನ ಚಾಲಕರು ಮಾಡ್ತಾಯಿದ್ರು. ಆದರೆ ಇದೆಲ್ಲವೂ ಬಂದ್ ಆದ ಪರಿಣಾಮ ಯಾವ ವಾಗನಕ್ಕೂ ಪ್ರಯಾಣಿಕರಿಲ್ಲ. ಮನೆ ಬಿಟ್ಟು ಹೊರಬಾರದಂತೆ ದಿಗ್ಭಂದನ ಹೇರಿರುವುದರಿಂದ ಜನ ಆಚೆ ಬರುತ್ತಿಲ್ಲ. ಹೀಗಾಗಿ ಯಾವ ಸ್ಥಳದಲ್ಲಿ ನಿಂತರೆ ಪ್ರಯಾಣಿಕರು ಸಿಗುತ್ತಾರೆ ಎನ್ನುವ ಪ್ರಶ್ನೆ ಹಾಕಿಕೊಂಡರೂ ಚಾಲಕರಿಗೆ ಉತ್ತರ ಸಿಗುವುದು ಕಷ್ಟವೇ. ಹೀಗಾಗಿ ಲಾಕ್ ಡೌನ್ ಎಫೆಕ್ಟ್ ಚಾಲಕರ ದುಡಿಮೆ ದೊಡ್ಡ ಹೊಡೆತ ತಂದೊಡ್ಡಿದೆ.

ಸಣ್ಣ ಅಂಗಡಿಗಳು – 

ನಗರದ ಐಟಿ-ಬಿಟಿ ಕಂಪನಿಗಳನ್ನ, ಜೊತೆಗೆ ಇನ್ನಿತರ ಕಂಪನಿಗಳಿಗೆ ಬಂದ್ ಮಾಡಿ ಮನೆಯಲ್ಲೇ ಕೆಲಸ ಮಾಡಲು ಸರ್ಕಾರ ಸೂಚಿಸಿದೆ. ಮಾಲ್, ಮಾರ್ಟ್ ಸಂಪೂರ್ಣ ಬಂದ್ ಮಾಡಲಾಗಿದೆ. ಮಾರುಕಟ್ಟೆ, ದಿನಸಿ ಅಂಗಡಿಗಳನ್ನ ಹೊರತು ಪಡಿಸಿ ಬೇರೆ ಯಾವ ಅಂಗಡಿಗಳು ತೆರೆಯುವಂತಿಲ್ಲ. ಹೀಗಾಗಿ ಪಾನ್, ಬಿಸ್ಕೇಟ್, ಕುರುಕುರೆ ಅಂತ ಮಾರುವ ಸಣ್ಣ ಪುಟ್ಟ ಅಂಗಡಿಗಳಿಗೆ ವ್ಯಾಪಕ ನಷ್ಟವಾಗಿದೆ.

ಒಟ್ಟಿನಲ್ಲಿ ಲಾಕ್ ಡೌನ್ ಎಫೆಕ್ಟ್ ಕೆಲ ಜನರ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿದ್ದು ನಿಜ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಜನ ಮಾತ್ರ ಅಮಾಯಕರನ್ನು ಬಲಿಪಡೆಯುತ್ತಿದ್ದಾರೆ.  ಅದೆಷ್ಟು ಜನ ಕಾಲ್ನಡಿಗೆಯಲ್ಲಿ 80 ಕಿ.ಮೀ ವರೆಗೂ ನಡೆದು ಊರು ಸೇರಿಕೊಳ್ಳುತ್ತಿದ್ದಾರೆ.