ಕೃಷ್ಣನ ಮದ್ವೆ, ಆದರೆ ರಾಧೆ ಜೊತೆ ಅಲ್ಲ : ‘ರಾಧಾ ಕಲ್ಯಾಣ’ದಲ್ಲೊಂದು ವಿಶಿಷ್ಟ ಕಲ್ಯಾಣ….

ಜೀ಼ ಕನ್ನಡ ವಾಹಿನಿ ಸದಾ ನವನವೀನ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕನ್ನಡಿಗರ ಮನೆ ಮಾತಾಗಿದೆ. ವಿಶಿಷ್ಟ ಕಥಾ ಹಂದರವುಳ್ಳ ಧಾರಾವಾಹಿಗಳನ್ನು ನಿರ್ಮಿಸಿ ನಿರಂತರವಾಗಿ ಕನ್ನಡಿಗರಿಗೆ ಮನರಂಜನೆಯ ಮಹಾಪೂರವನ್ನೇ ಒದಗಿಸಿದೆ. ಕಿರುತೆರೆಯ ಸಾಂಪ್ರದಾಯಿಕ ಚೌಕಟ್ಟನ್ನೂ ಮೀರಿ, ಸತತವಾಗಿ ವೀಕ್ಷಕರ ಮುಂದೆ ಹೊಸ ಅಲೆಯ ಕಥೆಗಳನ್ನು ಕಟ್ಟಿಕೊಡುತ್ತಿದೆ. ಅಂತಹ ಯಶಸ್ವೀ ಧಾರಾವಾಹಿಗಳಲ್ಲಿ ‘ರಾಧಾ ಕಲ್ಯಾಣ’ ಧಾರಾವಾಹಿಯೂ ಒಂದು. ‘ರಾಧಾ ಕಲ್ಯಾಣ’ ಒಂದು ವಿಶಿಷ್ಟ ಕಲ್ಯಾಣಕ್ಕೆ ಸಾಕ್ಷಿಯಾಗುವುದರ ಮೂಲಕ ಕುತೂಹಲಕರ ಘಟ್ಟಕ್ಕೆ ಬಂದು ನಿಂತಿದೆ.

ಶ್ರೀಮಂತ ಕುಟುಂಬದಲ್ಲಿ ಬೆಳೆದಿರುವ ಕಥಾನಾಯಕ ಕೃಷ್ಣ ಯಾವುದೇ ಜವಾಬ್ದಾರಿಗಳಿಲ್ಲದೇ ಮೋಜು ಮಸ್ತಿ ಮಾಡುವುದೇ ಜೀವನ ಎಂದುಕೊಂಡವನು. ಅತ್ತ ಕಥಾನಾಯಕಿ ರಾಧಾ ಕುಟುಂಬದ ನಿರ್ವಹಣೆಗಾಗಿ ಹೂವಿನ ಅಲಂಕಾರ ಮಾಡುವ ವೃತ್ತಿ ಕೈಗೊಂಡವಳು. ವಿಶಿಷ್ಟ ಸಂದರ್ಭದಲ್ಲಿ ಇಬ್ಬರ ಭೇಟಿಯಾಗಿ, ರಾಧಾ ಕೃಷ್ಣನ ಕಂಪನಿಯಲ್ಲಿ ಅವನ ಪಿ.ಎ. ಆಗಿ ಕೆಲಸಕ್ಕೆ ಸೇರುವಂತಾಗುತ್ತದೆ. ರಾಧಾ-ಕೃಷ್ಣರ ಬಾಲ್ಯದ ಘಟನೆಯೊಂದು ಮತ್ತೆ ಮುನ್ನೆಲೆಗೆ ಬಂದು ಈ ಕಥೆಗೆ ತಿರುವು ಕೊಡುತ್ತದೆ. ಪ್ರಸ್ತುತ ಮದುವೆ ನಡೆಯುತ್ತಿರುವುದು ಕೃಷ್ಣನಿಗೆ, ಆದರೆ ರಾಧೆಯ ಜೊತೆ ಅಲ್ಲ. ನಕ್ಷತ್ರ ಎಂಬ ಹುಡುಗಿಯ ಜೊತೆ. ಅತ್ತ ರಾಧೆಗೂ ಮದುವೆ ನಿಶ್ಚಯವಾಗಿದೆ, ಕೃಷ್ಣನ ಜೊತೆ ಅಲ್ಲ.. ಮುನಿ ಎಂಬ ದುರುಳನ ಜೊತೆಗೆ. ಅವನಿಂದ ಹೆಣ್ಣು ಮಕ್ಕಳ ಸಾಗಾಟ ಜಾಲಕ್ಕೆ ಬಲಿ ಆಗಲಿರುವ ರಾಧಾಳ ಮದುವೆಯನ್ನು ಕೃಷ್ಣ ಹೇಗೆ ತಡೆಯುತ್ತಾನೆ ಎಂಬುದು ಕುತೂಹಲಕರ ಘಟ್ಟ. ಹಾಗಾದರೆ ಕೃಷ್ಣ ಮತ್ತು ನಕ್ಷತ್ರಳ ಮದುವೆ ನಡೆಯುವುದೇ? ಕಾದು ನೋಡಬೇಕು.

“ಹೆಣ್ಣುಮಕ್ಕಳ ಮೇಲೆ ಮೋಸ-ದೌರ್ಜನ್ಯಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಅಂಥ ಸಂದರ್ಭಗಳ ಬಗ್ಗೆ ಅರಿವು ಮೂಡಿಸುವ ಸಣ್ಣ ಪ್ರಯತ್ನ ರಾಧಾ ಕಲ್ಯಾಣದ ವಿಶಿಷ್ಟ ಕಲ್ಯಾಣದ ಮೂಲಕ ನಡೆಯುತ್ತಿದೆ” ಎನ್ನುತ್ತಾರೆ ಜಿûÃ ಕನ್ನಡ ವಾಹಿನಿಯ ಬಿಸ್‌ನೆಸ್ ಹೆಡ್ ರಾಘವೇಂದ್ರ ಹುಣಸೂರು.

‘ರಾಧಾ ಕಲ್ಯಾಣ’ ಜಿ ಕನ್ನಡದಲ್ಲಿ ಪ್ರತಿದಿನ ಸಂಜೆ ೬ ಗಂಟೆಗೆ ಪ್ರಸಾರವಾಗುತ್ತಿದೆ.

Leave a Reply