WATCH : ಮನೀಶ್ ಮೇಲೆ ಕೂಗಾಡಿದ ಮಾಹಿ..! : ಕೂಲ್ ಧೋನಿ ಗರಂ ಆಗಿದ್ದೇಕೆ..?

‘ ಕೂಲ್ ಕ್ಯಾಪ್ಟನ್ ‘ ಎಂದೇ ಹೆಸರಾಗಿರುವ ಮಹೇಂದ್ರ ಸಿಂಗ್ ಧೋನಿ ಸಾಮಾನ್ಯವಾಗಿ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡು ವರ್ತಿಸುವುದಿಲ್ಲ. ಸೆಂಚುರಿಯನ್ ನಲ್ಲಿ ನಡೆದ 2ನೇ ಟಿ20 ಪಂದ್ಯದ ವೇಳೆ, ಧೋನಿ ಸ್ವಭಾವಕ್ಕೆ ತದ್ವಿರುದ್ಧವಾದ ನಡವಳಿಕೆ ಕಂಡುಬಂದಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಭಾರತವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿತು. ಆರಂಭಿಕ ಬ್ಯಾಟ್ಸಮನ್ ವಿಫಲರಾದರೂ, ಧೋನಿ ಹಾಗೂ ಮನೀಶ್ ಪಾಂಡೆ 98 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.

ಕೊನೆಯ ಓವರ್ ನಡೆಯುತ್ತಿದ್ದ ವೇಳೆ, ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಮನೀಶ್ ಪಾಂಡೆ ಅವರ ಗಮನ ಬೇರೆಲ್ಲೋ ಇದ್ದುದನ್ನು ಗಮನಿಸಿದ ಧೋನಿ ಕೆಂಡಾಮಂಡಲವಾಗಿದ್ದಾರೆ. ಆಗ ಧೋನಿ ‘ ಓಯ್ #*$%@#, ಸ್ವಲ್ಪ ಇಲ್ಲಿ ನೋಡು, ಅಲ್ಲೇನು ನೋಡ್ತಿದಿಯ..? ‘ ಎಂದು ಕೂಗಾಡಿದ್ದಾರೆ. ಈ ದೃಶ್ಯಾವಳಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಟಂಪ್ ಮೈಕಿನಲ್ಲಿ ಧೋನಿ ಅವರ ಧ್ವನಿಯೂ ರೆಕಾರ್ಡ್ ಆಗಿದೆ.

Leave a Reply