ಕೂದಲುದುರುವ ಸಮಸ್ಯೆ ನಿವಾರಣೆಗೆ ಫುಡ್ ಡಯಟ್ : ಬಹುಬೇಗ ಫಲಿತಾಂಶ ಪಡೆಯುವ ಪ್ಲಾನ್

ಕೂದಲುದುರುವ ಸಮಸ್ಯೆ ಎಲ್ಲರಿಗೂ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಕೂದಲುದುರುವ ಸಮಸ್ಯೆ ಅಧಿಕವಾಗಿರುತ್ತದೆ. ಇದಕ್ಕೆ ಸರಿಯಾಗಿ ಆಹಾರ ಸೇವಿಸಿದೇ ಇರುವುದು ಒಂದು ಕಾರಣವಾಗಿರಬಹುದು. ಕೂದಲುದುರುವ ಸಮಸ್ಯೆಗೆ ಒಂದು ಡಯಟ್ ಪ್ಲಾನ್ ಇದೆ ಅದನ್ನೊಮ್ಮ ಚೆಕ್ ಮಾಡಿ.

ಹೌದು.. ಒಂದೇ ಸಮನೆ  ಕೂದಲುದುರುವುದನ್ನ ಕಡಿಮೆ ಮಾಡಲು  ಒಂದು ಡಯಟ್ ಪ್ಲಾನ್ ಹೇಳ್ತೀವಿ ನೋಡಿ.

ಬೆಳಿಗ್ಗೆ ಖಾಲಿ ಹೊಟ್ಟೆಗೆ ನೆಲ್ಲಿಕಾಯಿ ಅಥವಾ ಆಲೂವೆರಾ ಜ್ಯೂಸ್ ಕುಡಿಯಿರಿ. ಇದು ನಿಮ್ಮ ಕೂದಲ ಕಾಂತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಕೂದಲು ಸದೃಢವಾಗಿ ಬೆಳೆಯಲು ಸಹಕಾರಿಯಾಗಿದೆ.

ಒಂದು ಗಂಟೆ ಬಿಟ್ಟು ಗ್ರೀನ್ ಟೀ ಮತ್ತು ರಾತ್ರಿ ಇಡಿ ನೆನೆಸಿಟ್ಟ  ನಾಲ್ಕರಿಂದ 5 ಬಾದಾಮಿಯನ್ನು ತಿನ್ನಬೇಕು. ಇದು ಕೂದಲಿಗೆ ಶಕ್ತಿ ನೀಡುತ್ತದೆ.

ಬೆಳಗಿನ ಉಪಹಾರಕ್ಕೆ ಒಂದು ಗ್ಲಾಸ್ ಹಾಲು, ಒಂದು ಮೊಟ್ಟೆ, ಮೊಳಕೆ ಕಾಳು, ಫ್ರೂಟ್ಸ್ ಜ್ಯೂಸ್ ಕುಡಿಯಿರಿ.

ಮಧ್ಯಾಹ್ನಕ್ಕೆ  ಬೇಳೆ ಸಾರಿ, ರೈಸ್, ಮೊಸರು, ಪನ್ನಿರು, ಫ್ರೂಟ್ಸ್ ಅಥವಾ ವೆಜಿಟೇಬಲ್ ಸಲಾಡ್ ಸೇವಿಸಿ.

ಸಂಜೆ ಹೊತ್ತು ಗ್ರೀನ್ ಟೀ , ಫ್ರೂಟ್ ಜ್ಯೂಸ್ ಸೇವನೆ ಮಾಡಬಹುದು.

ರಾತ್ರಿ ಊಟಕ್ಕೆ ಬೇಳೆ ಸಾರು, ಅನ್ನ, ಹಸಿರು ಸೊಪ್ಪು, ಚಪಾತಿ ತಿನ್ನಿ. ಇದು ಮೈಕಾಂತಿ ಹೆಚ್ಚಿಸುತ್ತದೆ ಜೊತೆಗೆ ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಈ ರೀತಿ ನಿಮ್ಮ ಆಹಾರ ಪದ್ಧತಿ ರೂಢಿಸಿಕೊಂಡರೆ ಕೂದಲುದುರುವ ಸಮಸ್ಯೆಯಿಂದ ಬಹುಬೇಗ ಮುಕ್ತರಾಗಬಹುದು.

Leave a Reply