ತಣ್ಣಗಿದ್ದ ಮಂಗಳೂರಿಗೆ ಬೆಂಕಿ ಹಚ್ಚಿದ್ದೇ ಪೊಲೀಸರು – ಮಾಜಿ ಸಿಎಂ ಹೆಚ್.ಡಿ.ಕೆ ಫುಲ್ ಗರಂ..!

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ 19-12-2019ರಂದು ನಡೆದ ಪ್ರತಿಭಟನೆ ವೇಳೆ ಪೊಲೀಸರು ಗೋಲಿಬಾರ್ ನಡೆಸಿದ್ದಕ್ಕೆ ಕಾರಣದ ಸಾಕ್ಷ್ಯ ದೃಶ್ಯಗಳನ್ನುಪೊಲೀಸರು ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮಾಜಿ ಸಿಎಂ ಕುಮಾರಸ್ವಾಮಿ 35 ದೃಶ್ಯಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಪೊಲೀಸರು ಅಮಾಯಕರ ಮೇಲೆ ಹಲ್ಲೆ ಮಾಡಿ, ಗೋಲಿಬಾರ್ ಮಾಡಿದ ದೃಶ್ಯಗಳಿವೆ.

ಹೌದು… ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಗೋಲಿಬಾರ್ ವಿಚಾರವನ್ನ ಸಿಸಿ ಕ್ಯಾಮರಾದ ಕೆಲ ವಿಡಿಯೋಗಳನ್ನು ರಿಲೀಸ್ ಮಾಡುವ ಮೂಲಕ ಪೊಲೀಸರು ಸಮರ್ಥಿಸಿಕೊಂಡಿದ್ದರು. ಆದರೆ ಇದಕ್ಕೆ ಪ್ರತಿಯಾಗಿ ಪೊಲೀಸರು ಮಾಡಿದ ೆಡವಟ್ಟಿನ ವಿಡಿಯೋಗಳನ್ನ ಮಾಜಿ ಸಿಎಂ ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ತಣ್ಣಗಿದ್ದ ಮಂಗಳೂರಿಗೆ ಬೆಂಕಿ ಹಚ್ಚಿದ್ದೇ ಪೊಲೀಸರು. ಆ ವೇಳೆ ಮಾಧ್ಯಮದವರಿಗೂ ತಡೆ ಒಡ್ಡಿದರೂ. ಸರ್ಕಾರ ಅವರ ತಪ್ಪು ಸರಿಪಡಿಸಿಕೊಳ್ಳಲಿ. ಬೆಂಕಿ ಹಚ್ಚೋ ಕೆಲಸ ಬಿಜೆಪಿ ಮಾಡ್ತಾಯಿದೆ. ಅದನ್ನ ಆರಿಸೋ ಕೆಲಸ ಜೆಡಿಎಸ್ ಮಾಡ್ತಾಯಿದೆ. ಸರ್ವಾಜನಿಕರು, ಅಮಾಯಕರಿಗೆ ನ್ಯಾಯ ಸಿಗಬೇಕು ಅಷ್ಟೇ ನನ್ನು ಉದ್ದೇಶ. ಇದರಿಂದ ನನಗೇನು ಪ್ರಯೋಜನವಿಲ್ಲ. ಮಂಗಳೂರು ಗೋಲಿಬಾರ್ ನಲ್ಲಿ ಸಾವನ್ನಪ್ಪಿದ ಇಬ್ಬರಿಗೂ ಪರಿಹಾರ ಘೋಷಣೆ ಮಾಡಿದ ಸರ್ಕಾರ ಪುನ: ಅವರೇ ಗಲಭೆಕೋರರು ಎಂದು ಪರಿಹಾರ ವಾಪಸ್ಸು ಪಡೆದುಕೊಂಡಿದೆ. ಹಲ್ಲೆಗೊಳಗಾದವರು ಸ್ವಂತ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸತ್ತವರಿಗೂ ಪರಿಹಾರ ನೀಡಿಲ್ಲ. ಅಮಾಯಕರಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ.

ಗಲಭೆಕೋರರು ಆಟೋದಲ್ಲಿ ಕಲ್ಲು ತಂದಿದ್ರು ಅನ್ನೋ  ದೃಶ್ಯ ಪೊಲೀಸರು ಬಿಡುಗಡೆ ಮಾಡಿದ್ರು. ಇವತ್ತಿನವರೆಗೂ ಆಟೋ ವನ್ನ ಸೀಸ್ ಮಾಡಿದ್ದಾರಾ..? ವಿಚಾರಣೆ ಮಾಡಿದ್ದಾರಾ..? ಆ ಆಟೋ ಯಾಕಾಗಿ ಬಂದಿತ್ತು…? ಎಲ್ಲಿಂದ ಬಂದಿತ್ತು..? ಪೊಲೀಸರು ಬಿಡುಗಡೆ ಮಾಡಿದ ಆಟೋದಲ್ಲಿದ್ದಿ ಕಲ್ಲು ಜಲ್ಲಿ ಕಲ್ಲು. ಗಲಭೆಕೋರರಿಗೆ ಕೊಡಲು ತಂದ ಕಲ್ಲು ಅಲ್ಲ. ಇದನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲಾಗಿದೆ ಅಷ್ಟೇ. ಅದರ ಬಗ್ಗೆ ವಿವರಣೆ ಕೊಡಲಿ ಎಂದು ಸವಾಲ್ ಹಾಕಿದರು.

ಈ ಗಲಭೆ ಹೊಣೆಯನ್ನು ಸರ್ಕಾರವೇ ಹೋರಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.