ಮಂಗಳೂರು ಗೋಲಿಬಾರ್‌ ಪ್ರಕರಣ – ಪರಿಹಾರ ರದ್ದು ಮಾಡಿಲ್ಲ – ಡಿಸಿಎಂ ಸ್ಪಷ್ಟ

ಮಂಗಳೂರು ಹಿಂಸಾಚಾರ, ಗೋಲಿಬಾರ್‌ ಪ್ರಕರಣದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ನೀಡಬೇಕೆಂದಿದ್ದ ಪರಿಹಾರ ವಾಪಸ್‌ ವಿಚಾರಕ್ಕೆ ಪರಿಹಾರವನ್ನು ರದ್ದು ಮಾಡಿಲ್ಲ ಎಂದು ಡಿಸಿಎಂ ಗೋವಿಂದ ಸ್ಪಷ್ಟನೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಆಣೆಕಟ್ಟಿಗೆ ಭೇಟಿ ನೀಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಗೋವಿಂದ ಕಾರಜೋಳ, ಗೋಲಿಬಾರ್ ನಲ್ಲಿ ಸತ್ತವರ ಪರಿಹಾರ ರದ್ದು ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಪರಿಹಾರವನ್ನು ರದ್ದು ಮಾಡಿಲ್ಲ. ಈ ವಿಚಾರವನ್ನ ಯಾರು ತಪ್ಪಾಗಿ ಅರ್ಥೈಸಬಾರದು. ಗೋಲಿಬಾರ್‌ ನಲ್ಲಿ ಸತ್ತವರ ಕುಟಂಬಸ್ಥರನ್ನು ನಾವು ಭೇಟಿ ಮಾಡಿದ್ದೇವೆ. ನಾನು, ಸಿಎಂ ಬಿಎಸ್ವೈ, ಗೃಹ ಮಂತ್ರಿ ಬೊಮ್ಮಾಯಿ ಭೇಟಿ ಮಾಡಿದ್ದೇವೆ. 25 ದೃಶ್ಯಾವಳಿ ಸಮೇತ ನೀವು ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದೀರಿ.

ಸಿಎಂ ತನಿಖೆ ನಡೆಸಿ ವರದಿ ಬಂದ ಬಳಿಕ ಪರಿಹಾರದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಗೋಲಿಬಾರ್‌ನಲ್ಲಿ ಸತ್ತವರು ಸಂಚಿನಲ್ಲಿದ್ದರು ಎನ್ನುವ ಅನುಮಾನ ವ್ಯಕ್ತವಾಗಿತ್ತು. ಜನರು ಸಹ ಈ ಬಗ್ಗೆ ಅನುಮಾನ ವ್ಯಕ್ತಮಾಡಿದ್ದಾರೆ. ಸಿಎಂ ಸತ್ಯ, ಅಸತ್ಯ ತಿಳಿದು ಪರಿಹಾರ ಕಾರ್ಯ ಮಾಡಿ ಎಂದಿದ್ದಾರೆ.