ಸಪ್ತಪದಿ ತುಳಿಯುವ ಮೊದಲೇ ಸಾವಿನ ಮನೆ ಸೇರಿದ ವರ!

ಅದು ಜೀವನದಲ್ಲಿ ಅತ್ಯುತ್ತಮ ಕ್ಷಣಕ್ಕಾಗಿ ಗಂಡು ಹೆಣ್ಣು ಇಬ್ಬರೂ ಸಿದ್ಧಗೊಂಡಿದ್ದರು. ಇದಕ್ಕಾಗಿ ಮದುವೆ ಮಂಟಪ ಸಿದ್ಧಗೊಂಡಿತ್ತು. ಬಾಳೆ ಕಂಬ ರಾರಾಜಿಸುತ್ತಿದ್ದವು. ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿತ್ತು. ಎಲ್ಲರೂ ಅಂದುಕೊಂಡಂತೆ ಆಗಿದ್ದರೆ ಆ ವಧುವರರು ಈ ವೇಳೆಗೆ ಸಂಗಾತಿಯಾಗಿರ ಬೇಕಿತ್ತು. ಆದರೆ ಇದೇ ವೇಳೆ ವಿಧಿ ಅವರ ಬಾಳಲ್ಲಿ ಆಟವಾಡಿದ್ದು ಮಾತ್ರ ದುರಂತ.

ವಧು ವರರು ಇಬ್ಬರೂ ತಮ್ಮ ಹೊಸ ಬಾಳಿಗೆ ಕಾಲಿರಿಸಲು ಸಿದ್ಧರಾಗಿದ್ದರು. ಇದಕ್ಕಾಗಿ ಕಲ್ಯಾಣ ಮಂಟಪ ಸಿದ್ಧಗೊಂಡಿತ್ತು. ಆದರೆ ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಯಮರಾಯ ಇಷ್ಟು ಬೇಗ ವರನ ಬಾಳಲ್ಲಿ ಬಂದು ಎರಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ತಾಳಿ ಕಟ್ಟಲು ಕೆಲವೇ ಕ್ಷಣವಿರುವಾಗಲೇ ವರನು ಹೃದಯಾಘಾತದಿಂದ ಸಾವನ್ನಪ್ಪಿದ್ದು ಸಂಭ್ರಮದ ಮನೆಯಲ್ಲಿ ಸೂತಕದ ವಾತಾವರಣ ಸೃಷ್ಟಿಯಾಯಿತು.

ಹೌದು. ಈ ಘಟನೆ ನಡೆದಿದ್ದು ತುಮಕೂರಿನ ಗವಿಮಂಟಪ ಕಲ್ಯಾಣ ಮಂಟಪದಲ್ಲಿ. ವಸಂತ್‌ ಕುಮಾರ್‌ ಎಂಬ ವರ ಹೃದಯಾಘಾತದಿಂದ ಕೊನೆಯುಸಿರೆಳೆದವರು. ಇವರು ಎಂ.ಟೆಕ್‌ ಪದವೀಧರರಾಗಿ ಉನ್ನತ ಹುದ್ದೆಯಲ್ಲಿದ್ದರು. ಎಂ.ಟೆಕ್‌ ಪದವೀಧರೆಯೊಂದಿಗೆ ವಿವಾಹ ನೆರವೇರಬೇಕಿತ್ತು. ಆದರೆ ಶನಿವಾರ ಸಂಜೆ ವರಪೂಜೆ ಸಂಪ್ರದಾಯಗಳು ನಡೆದಿದ್ದವು. ಭಾನುವಾರ ಬೆಳಿಗ್ಗೆ ತಾಳಿ ಕಟ್ಟುವ ವೇಳೆಗೆ ಮೊದಲೇ ಯಮರಾಯ ಅವರ ಬಾಳಲ್ಲಿ ಆಟವಾಡಿದ್ದಾನೆ. ಮದುವೆ ಮಂಟಪದಲ್ಲಿ ನಲಿದು ಕುಣಿಯಬೇಕಿದ್ದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

Comments are closed.