ದೇವಸ್ಥಾನದ ಬಳಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ : ಆತಂಕಗೊಂಡ ಜನ

ರಾಯಚೂರಿನ ನಾರಾಯಣಪುರದ ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿದೆ.

ಹೌದು… ಹಿನ್ನೀರಿನಲ್ಲಿರುವ ನವಲಿಯ ಜಡೇಲಿಂಗೇಶ್ವರ ದೇವಸ್ಥಾನದ ಬಳಿ ಮೊಸಳೆ ಪ್ರತ್ಯಕ್ಷಗೊಂಡಿದೆ. ಲಿಂಗಸಗೂರು ತಾಲೂಕಿನ  ನವಲಿ ಗ್ರಾಮವು ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಗ್ರಾಮವಾಗಿದೆ. ಇಲ್ಲೇ ಇರುವ ಜಡೇಲಿಂಗೇಶ್ವರ ದೇವಸ್ಥಾನ ಕ್ಕೆ ಸಾಕಷ್ಟು ಜನರು ಆಗಮಿಸುತ್ತಾರೆ.

ಕಳೆದ ಹಲವು ದಿನಗಳಿಂದ ದೇವಸ್ಥಾನದ ಸುತ್ತಲು ಮೊಸಳೆ ಕಾಣಿಸಿಕೊಳ್ಳುತ್ತಿರುವದರಿಂದ  ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ತಕ್ಷಣವೇ ಈ ಬಗ್ಗೆ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

 

Leave a Reply