ಹುಬ್ಬಳ್ಳಿಯಲ್ಲಿ ಮಾನಸಿಕ ಅಸ್ವಸ್ಥನ ಹುಚ್ಚಾಟಕ್ಕೆ ಕಂಗಾಲಾದ ಜನ : ವಿಡಿಯೋ ವೈರಲ್

ಮಾನಸಿಕ ಅಸ್ವಸ್ಥನ ಹುಚ್ಚಾಟಕ್ಕೆ ಜನ ಕಂಗಾಲಾಗಿದ ಘಟನೆ ಹುಬ್ಬಳ್ಳಿಯ ಚೆನ್ನಮ್ಮ‌ ವೃತ್ತದ ಬಳಿಯ ಪಿಬಿ ರಸ್ತೆಯಲ್ಲಿ ನಡೆದಿದೆ.

ರಸ್ತೆಯಲ್ಲಿ ಓಡಾಡುವ ಜನರಿಗೆ ಹುಚ್ಚ ಕಿರಿಕ್ ಮಾಡಿದ್ದಾನೆ. ಸಾರ್ವಜನಿಕರಿಗೆ ಹೊಡೆಯಲು ಹೋಗುವ ಮಾನಸಿಕ ಅಸ್ವಸ್ಥನನ್ನು ಕಂಡು ಜನ ಗಾಬರಿಗೊಂಡಿದ್ದಾರೆ.

ಅಷ್ಟೇ ಅಲ್ಲ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆಯೂ ಹುಚ್ಚ ದಾಳಿ ಮಾಡಲು ಮುಂದಾಗಿದ್ದಾನೆ. ಹುಚ್ಚನ ರಂಪಾಟ ಕಂಡ ಜನ ಮಾನಸಿಕ ಅಸ್ವಸ್ಥನನ್ನು ಸಾಂತ್ವನ ಕೇಂದ್ರಕ್ಕೆ ಸಾಗಿಸಲು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಹಾನಗರ ಪಾಲಿಕೆ ಗಮನಕ್ಕೆ ತಂದರೂ ನಿರ್ಲಕ್ಷ ವಹಿಸಿದ್ದಾರೆಂದು ಜನ ದೂರಿದ್ದಾರೆ. ಹುಚ್ಚನ ರಂಪಾಟದ ವಿಡಿಯೋ ಮಾಡಿದ ಜನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.