ಕಾಲ ಬೆರಳ ಉಗುರು ಕಿತ್ತು ಬಂದ್ರು ಅರಿವಿಲ್ಲದೆ ಆಟದಲ್ಲಿ ಮೈಮರೆತಿದ್ದ ಸಚಿವ ಸಿ.ಟಿ.ರವಿ…!

ಹೆಬ್ಬರಳಿನ ಉಗುರು ಕಿತ್ತಕೊಂಡರು ಸಚಿವ ಸಿ.ಟಿ.ರವಿ ಆಟದಲ್ಲಿ ಮೈಮರೆತಿದ್ದ ಘಟನೆ ಚಿಕ್ಕಮಗಳೂರಿನ ನಲ್ಲೂರಿನ ಕ್ರೀಡೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಉತ್ಸವದ ಅಂಗವಾಗಿ ನಡೆಯುತ್ತಿರೋ ಕೆಸರುಗದ್ದೆಯ ಹಗ್ಗಜಗ್ಗಾ ಕ್ರೀಡೆಯಲ್ಲಿ ಸಿಟಿ ರವಿ ಭಾಗವಹಿಸಿದ್ದರು. ಕಾಲ ಬೆರಳು ಕಿತ್ತು ಬಂದ್ರು ಆಟದಲ್ಲಿ ಮೈಮರೆತಿದ್ದ ಸಿ.ಟಿ.ರವಿಗೆ ಅರಿವಿಲ್ಲ. ಮೇಲೆ ಬಂದು ಕಾಲು ತೊಳೆಯುವಾಗ ಅರಿವಾಗಿದೆ.

ಚಿಕ್ಕಮಗಳೂರು ತಾಲೂಕಿನ ನಲ್ಲೂರಿನಲ್ಲಿ ಫೆ. 29-29 ಹಾಗೂ ಮಾರ್ಚ್ 1 ರಂದು ನಡೆಯುವ ಚಿಕ್ಕಮಗಳೂರು ಹಬ್ಬಕ್ಕೆ ಇಂದಿನಿಂದ ವಿವಿಧ ಗ್ರಾಮೀಣ ಕ್ರೀಡಾಕೂಟ ಆರಂಭವಾಗಿವೆ. ಸಚಿವ ಸಿ.ಟಿ.ರವಿ ಬೆಳಗ್ಗೆಯಿಂದ ಕೆಸರುಗದ್ದೆಯಲ್ಲೇ ಆಟವಾಡುತ್ತಿದ್ದರು. ಈ ವೇಳೆ ಕಾಲು ಬೆರಳ ಉಗುರು ಕಿತ್ತು ಬಂದಿದೆ.