ದೇಶದ್ರೋಹದ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಸಚಿವೆ ಶಶಿಕಲಾ ಜೋಲ್ಲೆ ಆಕ್ರೋಶ…

ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಸಚಿವೆ ಶಶಿಕಲಾ ಜೋಲ್ಲೆ ಗದಗ ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಸಿಎಎ ವಿರೋಧಿಸಿ ಪ್ರತಿಭಟನೆ ಮಾಡೋದು ಅವರ ಹಕ್ಕು. ಆದ್ರೆ ಪ್ರತಿಭಟನೆ ವೇಳೆ 18 ರಿಂದ 20 ವಯಸ್ಸಿನ ಅದು ಹಿಂದೂ ಯುವತಿಯರು ಘೋಷಣೆ ಕೂಗೋದು ತಪ್ಪು ಎಂದಿದ್ದಾರೆ.

ದೇಶದ್ರೋಹದ ಘೋಷಣೆ ಕೂಗಿದಕ್ಕೆ ನಾನು ಹಾಗೂ ಇಡೀ ದೇಶದ ಜನರು ಅದನ್ನು ಖಂಡಿಸಿದ್ದೇವೆ. ಪೊಲೀಸರು ಸಹ ಅವಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ದೇಶದ್ರೋಹದ ಘೋಷಣೆ ಹಾಕುವದರ ಹಿಂದೆ ಯಾವದೋ ಕಾಣದ ಕೈಗಳ ಕೈವಾಡ ಇದೆ. ಹಿಂದೂ ಯುವತಿಯರನ್ನು ಇಟ್ಕೊಂಡು ಯಾವದೋ ಸಂಘಟನೆಗಳು ಘೋಷಣೆ ಕೂಗಿಸುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ.

ದೇಶದ್ರೋಹದ ಘೋಷಣೆ ಕೂಗಿದವರನ್ನು ಪಾಕ್ತಿಸಾನಕ್ಕೆ‌ ಕಳುಹಿಸಬೇಕು. ಅಲ್ಲಿ ಅವರಿಗೆ ಯಾವ ರೀತಿ ಟ್ರೀಟಮೆಂಟ್ ಸಿಗುತ್ತೆ ಎನ್ನುವದು ಗೊತ್ತಾಗಬೇಕು. ಈ ದೇಶದ ನೀರು ಕುಡಿದು, ಅನ್ನ ತಿಂದು, ನೆಲದಲ್ಲಿ ಇದ್ಕೊಂಡು ಘೋಷಣೆ ಕೂಗುವದನ್ನು ನಾವು ಖಂಡಿಸುತ್ತೆನೆ ಎಂದು ಸಚಿವೆ ಶಶಿಕಲಾ ಕಿಡಿಕಾರಿದ್ರು.