ಪ್ರಚಾರಕ್ಕೂ ಮುನ್ನ ದಾವಣಗೆರೆಯಲ್ಲಿಂದು ಸಚಿವ ಶ್ರೀರಾಮುಲು ಭರ್ಜರಿ ಪೂಜೆ…

ದಾವಣಗೆರೆಯಲ್ಲಿಂದು ಪ್ರಚಾರ ನಡೆಸಲಿರುವ ಸಚಿವ ಶ್ರೀರಾಮುಲು ಅವರು ಪ್ರಚಾರಕ್ಕೂ ಮುನ್ನ ನಿರಂತರ ಒಂದು ಗಂಟೆ ಕಾಲ ಶಿವ ಪೂಜೆ ಮಾಡಿದರು.

ಬೆಳಿಗ್ಗೆ ರುದ್ರಾಕ್ಷಿ ಹಾರ ಹಾಕಿ, ಕಾವಿ ಸಮವಸ್ತ್ರ ಧರಿಸಿ ಪೂಜೆಯಲ್ಲಿ ಸಚಿವರು ಪಾಲ್ಗೊಂಡಿದ್ದರು. ಪೂಜಾ ವಿಧಿವಿಧಾನಗಳ ಜೊತೆಗೆ ಶಿವ ನಾಮ ಪಠಿಸುತ್ತಾ, ಈ ಬಾರಿ ಉಪಚುನಾವಣೆ ಗೆಲುವಿಗಾಗಿ ಶಿವನಲ್ಲಿ ಪಾರ್ಥಿಸಿದರು.

ಪುರೋಹಿತರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡ ಶ್ರೀ ರಾಮಲು, ದಾವಣಗೆರೆ ನಗರದ ಸರಸ್ವತಿ ನಗರದ ಆಪ್ತರ ಮನೆಯಲ್ಲಿ ಪೂಜೆ ಸಲ್ಲಿಸಿದರು. ಒಂದು ಸಾವಿರದೊಂದು ಶಿವಜಪ ಮಾಡಿ ಪೂಜೆ ಮುಗಿಸಿ ಹಾವೇರಿ ಜಿಲ್ಲೆಯ ಹಿರೇಕೆರೂರು ಮತ್ತು ರಾಣೇಬೆನ್ನೂರು ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳುವರು ಎಂದು ಸಚಿರ ಆಪ್ತರು ತಿಳಿಸಿದ್ದಾರೆ.

Leave a Reply