ಪವಾಡ ಬಸವ : ಜನರ ಹೃದಯದಲ್ಲಿ ದೈವಸ್ವರೂಪ ಪಡೆದ ಲೋಕಲ್ ಲೋಕಾಯುಕ್ತ

ಅದು‌ ಅಂತಿಂಥ ಬಸವ ಅಲ್ಲ.ಈ ಭಾಗದ ಜನರ ಬಾಯಲ್ಲಿ ಲೋಕಲ್ ಲೋಕಾಯುಕ್ತ ಅಂತಲೇ ಪ್ರಸಿದ್ದಿ ಪಡೆದಿರುವ ಬಸವ. ಸಾಕ್ಷಾತ್ ಕಾಲಭೈರವೇಶ್ವರ ಪ್ರತಿರೂಪ.ಈ ಬಸವ ತನ್ನ ಪವಾಡದ ಮೂಲಕವೇ ಈ ಭಾಗದ ಜನರ ಹೃದಯದಲ್ಲಿ ದೈವಸ್ವರೂಪವನ್ನು ಪಡೆದುಕೊಂಡಿದೆ. ಯಾವುದೇ ಸಮಸ್ಯೆ ಇರಲಿ ಅದು ನೆರವೇರಿಸುವ ಪಾದಭರವಸೆ ನೀಡಿದ್ರು ಅದು ಎಷ್ಟೇ ಕಠಿಣ ಸಮಸ್ಯೆಯಾಗಿದ್ರು ತನ್ನ ಪವಾಡದ ಮೂಲಕ ಬಗೆ ಹರಿಸುತ್ತದೆ. ಆಗಿದ್ರೆ ಯಾವುದು‌ ಆ ಪವಾಡ ಬಸವ ಅಂತೀರಾ ಇಲ್ಲಿದೆ ಅದಕ್ಕುತ್ತರ.

ಹೌದು! ಈ ಬಸಪ್ಪ ಮಂಡ್ಯ ಜಿಲ್ಲೆ‌ ಮದ್ದೂರು ತಾಲೂಕಿನ ಶ್ರೀ ಕಾಲಭೈರವೇಶ್ವರ ದೇವಾಲಯದಲ್ಲಿರುವ ಬಸಪ್ಪ . ಈ ಬಸಪ್ಪ ಸಾಕ್ಷಾತ್ ಧೈವ ಸ್ವರೂಪದ ಬಸಪ್ಪನೆಂದೆ ಇಲ್ಲಿನ ಭಕ್ತರ ನಂಬಿಕೆ. ಈ ಬಸಪ್ಪ ತನ್ನ ದೈವ ಶಕ್ತಿಯ ಸ್ವರೂಪದ ಮೂಲಕವೇ ಕೋರ್ಟು ಕಟಕಟೆಯಲ್ಲಿ ಬಗೆಹರಿಯದ ಅದೆಷ್ಟೋ ಸಮಸ್ಯೆಗಳನ್ನು ತನ್ನ ಪವಾಡದ‌ ಮೂಲಕ ಬಗೆ ಹರಿಸಿ ಲೋಕಲ್ ಲೋಕಾಯುಕ್ತ ಎಂದೇ ಹೆಸರು‌ ಪ್ರಸಿದ್ದಿಯಾಗಿದೆ. ನೆನ್ನೆ ಕೂಡ ಮಂಡ್ಯದ ಹೊಸಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಶ್ರೀ ತಂಪಿನ ಮಾರಮ್ಮ ದೇವಾಲಯಕ್ಕೆ ಅರ್ಚಕನ ಆಯ್ಕೆ ವಿಚಾರದಲ್ಲಿ ಊರಿನ‌ ಮುಖಂಡರ ಮನವಿ ಮೇರೆಗೆ ಬಸಪ್ಪನನ್ನು ಕರೆಸಲಾಗಿತ್ತು. ಊರಿಗೆ ಬನಮದ ಬಸಪ್ಪ ನೂರಾರು ಜನರ ಮದ್ಯೆ ಜಗದೀಶ್ ಎನ್ನುವ ಯುವಕನನ್ನು ಆಯ್ಕೆ ಮಾಡಿ ತನ್ನ ಪವಾಡ ಮೆರೆದಿದೆ. ಯುವಕನ ಆಯ್ಕೆಗೆ ಕುಟುಂಬಸ್ಥರು‌ ವಿರೋಧ ವ್ಯಕ್ತಪಡಿಸಿದ್ರು ಬಸಪ್ಪನ ಆಯ್ಕೆ ಮುಂದೆ ಏನು ನಡೆಯಲಿಲ್ಲ.ಸದ್ಯ ಬಸಪ್ಪ ಆಯ್ಕೆ ಮಾಡಿದ ಈ ಯುವಕ‌ ತಮ್ಮೂರಿನ‌ ದೇವಾಲಯದ ಅರ್ಚಕನಾಗಿ ಪೂಜೆ ಮಾಡಲು ಒಪ್ಪಿದ್ದು ಅರ್ಚಕನಾಗಿ ಆ ದೇವರಿಗೆ ಪೂಜೆ ಸಲ್ಲಿಸ್ತಿದ್ದಾನೆ.

ಇನ್ನು ನೆನ್ನೆಯ ಘಟನೆಯ ಸಂಧರ್ಭದಲ್ಲಿ ಮೊದಲು ಅದೇ ಊರಿನ‌ ಮನು ಎಂಬ ಯುವಕನನ್ನು ಬಸಪ್ಪ ಗುಡ್ಡಪ್ಪನನ್ನಾಗಿ ಆಯ್ಕೆ ಮಾಡಿತ್ತಾದ್ರು‌ ಆ ಯುವಕ ಈ ಕೆಲಸ ತನ್ನಿದಾಗದೆಂದು ತಪ್ಪು ಕಾಣಿಕೆ ಕಟ್ಟಿದ ಮೇಲೆ ಆ ಬಸಪ್ಪ ಜಗದೀಶ್ ಎಂಬುವ ಯುವಕನನ್ನು ನೇಮಿಸಿದೆ. ಆಯ್ಕೆ ವೇಳೆ ಈ ಯುವಕನ್ನು ಕೊಂಬಿನಿಂದ ತಿವಿದು ಎಳೆದೊಯ್ದು, ಹಳ್ಳದ ನೀರಿಗೆ ನೂಕಿ ಸ್ನಾನ ಮಾಡಿಸಿ ದೇವಾಲಯದ ಪೂಜೆ ಮಾಡುವಂತೆ ಸೂಚನೆ ನಿಜಡಿದೆ. ಬಸಪ್ಪನ‌ ಪವಾಡಕ್ಕೆ ಗ್ರಾಮಸ್ಥರೆಲ್ಲರು ಅಚ್ಚರಿ ವ್ಯಕ್ತಪಡಿಸಿದ್ದು ಬಸಪ್ಪನ ಪವಾಡ ಕೊಂಡಾಡಿದ್ದಾರೆ. ಅಲ್ದೆ ಇದು ಸಾಮಾನ್ಯ ಬಸಪ್ಪ ಅಲ್ಲ ದೈವದ ಬಸಪ್ಪ ಎಂದಿದ್ದು ಕೊಂಡಿದ್ದಾರೆ. ಚಿಕ್ಕಕರಿಸನ ಕೆರೆ ಬಸಪ್ಪನ ಪವಾಡ ಮಂಡ್ಯ ಜಿಲ್ಲೆ ಸೇರಿದಂತೆ ಹಲವು ಕಡೆ‌ ನಡೆದಿದ್ದು ಅದು ಯಾವುದೇ ಸಮಸ್ಯೆ ಇರಲಿ ಆಗುತ್ತದೆ ಎಂದರೆ ಮೊದಲು ಬೇಡಿಕೊಂಡರ ಕೈ ಮೇಲೆ ಪಾದ ನೀಡುತ್ತದೆ. ಈ ಬಸಪ್ಪ ಪವಾಡ ನೋಡಿರೋ ಭಕ್ತರು ಈ ಬಸಪ್ಪನನ್ನು ಸಾಕ್ಷಾತ್ ದೈವಿ ಸ್ವರೂಪದ ಬಸಪ್ಪ ಎಂದು ಪೂಜೆ ಸಲ್ಲಿಸುತ್ತಾರೆ. ಯಾವುದೇ ಸಮಸ್ಯೆ ಇದ್ರು ಕರೆದ ಊರಿಗೆ ಈ ಬಸಪ್ಪನನ್ನು ಕರೆ ತಂದು ಭಕ್ತಿಯಿಂದ ಪೂಜೆ ಸಲ್ಲಿಸಿ ಸಮಸ್ಯೆ ಬಗೆ ಹರಿಸುವಂತೆ ಬೇಡಿಕೊಂಡ್ರೆ ಇಲ್ಲ ಎನ್ನದೆ ಸಮಸ್ಯೆ ಬಗೆ ಹರಿಸಿದೆ. ಭಕ್ತಿಯಿಂದ ಬೇಡಿ ಬರುವ ಹಾದಿಯಲ್ಲಿ ಮಲಗುವ ಭಕ್ತರನ್ನು ಒಂಚೂರು ತುಳಿಯದ ರೀತಿ‌ ದಾಟಿ ಹೋಗುತ್ತದೆ ಈ ಬಸಪ್ಪ. ಬಸಪ್ಪನ ಪವಾಡಗಳು ಇಂದಿಗೂ‌ ನಡೆಯುತ್ತಿದ್ದು ಜನರ ನಂಬಿಕೆಯಲ್ಲಿ ಇದು ದೈವಿಶಕ್ತಿಯುಳ್ಳ ಬಸಪ್ಪನಾಗಿದೆ.

ಒಟ್ಟಾರೆ ಚಿಕ್ಕರಸಿನಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರನ ಬಸಪ್ಪ ತನ್ನ ಪವಾಡದಿಂದ ಸಾಕಷ್ಟು ಭಕ್ತರನ್ನು ಹೊಂದಿದ್ದಾನೆ.ದೈವಿ ಸ್ವರೂಪದ ಬಸಪ್ಪ ಎಂದು ಇಲ್ಲಿನ ಭಕ್ತರಲ್ಲಿ ನಂಬಿಕೆ ಇದ್ದಯ ಆಗಾಗಿ ಈ‌ ದೈವಿ ಪವಾಡ ಹೊರ ಹಾಕ್ತಿದ್ದು ಭಕ್ತರ ಪ್ರಶಂಸೆಗೆ ಪ್ರಾತ್ರವಾಗ್ತಿದೆ.

Leave a Reply