ಬಿಜೆಪಿಯವರು ಸಂಪರ್ಕ ಮಾಡಿ ಆಮಿಷ ಒಡ್ಡಿದ್ದರು, ಆದರೆ ನಾನು ತಿರಸ್ಕರಿಸಿದ್ದೇನೆ : ಸಿ.ಎಸ್ ಶಿವಳ್ಳಿ

‘ ಬಿಜೆಪಿಯವರು ನನ್ನ ಸಂಪರ್ಕ ಮಾಡಿದ್ದು ನಿಜ. ಆದ್ರೆ‌ ನಾನು ಅದನೆಲ್ಲಾ ತಿರಸ್ಕಾರ ಮಾಡಿದ್ದೇನೆಂದು ಕುಂದಗೋಳ ಕಾಂಗ್ರೆಸ್ ಶಾಸಕ‌ ಸಿ.ಎಸ್. ಶಿವಳ್ಳಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ‘ ಒಡ್ಡಿದ್ದ ಆಮೀಷ ಎಲ್ಲವೂ ಬಹಿರಂಗ ಪಡಿಸಲಾಗುವದಿಲ್ಲ ‘ ಎಂದರು.

‘ ನಾನು ಕಾಂಗ್ರೆಸ್ ಪಕ್ಷ ಬಿಡೋದು ದೂರದ ಮಾತು. ನಾನು ಕಟ್ಟಾ ಕಾಂಗ್ರೆಸ್ಸಿಗ. ಬಿಜೆಪಿಯವರ ಆಪರೇಷನ್ ಕಮಲ‌ ಅ್ಯಕ್ಟಿವ್ ಇರೋದು ನಿಜ. ಆದ್ರೆ ನಮ್ಮ‌ ಪಕ್ಷದವರು ಯಾರು ಪಕ್ಷ ಬಿಡಲ್ಲ. ನನ್ನನ್ನ ನನ್ನ ಕ್ಷೇತ್ರದ ಜನ ಕಾಂಗ್ರೆಸ್ ನಿಂದ ಆಯ್ಕೆ ಮಾಡಿದ್ದಾರೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷ ಬಿಡುವದಿಲ್ಲ ‘ ಎಂದಿದ್ದಾರೆ.

‘ ನನ್ನ ಪ್ರಕಾರ ಸಮ್ಮಿಶ್ರ ಸರ್ಕಾರ ಸೇಫ್ ಆಗಿದೆ. ಒಂದೋಮ್ಮೆ‌ ಸರ್ಕಾರ ಬೀಳಿಸಬೇಕು ಅಂದ್ರೆ 14 ಶಾಸಕರು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಗೆದ್ದು ಬರೋದು ಕಷ್ಟದ ಕೆಲಸ. ಹೀಗಾಗಿ ಯಾರೂ ರಾಜೀನಾಮೆ‌ ನೀಡಿ ಬಿಜೆಪಿ ಸೇರಲ್ಲ ‘ ಎಂದು ಸ್ಪಷ್ಟ ಪಡಿಸಿದ್ದಾರೆ.

3 thoughts on “ಬಿಜೆಪಿಯವರು ಸಂಪರ್ಕ ಮಾಡಿ ಆಮಿಷ ಒಡ್ಡಿದ್ದರು, ಆದರೆ ನಾನು ತಿರಸ್ಕರಿಸಿದ್ದೇನೆ : ಸಿ.ಎಸ್ ಶಿವಳ್ಳಿ

Leave a Reply

Your email address will not be published.