ಬ್ಯಾಂಕಿನಲ್ಲಿ ಹಣ ಎಗರಿಸಿದ ಕಳ್ಳರು : ಸಿಸಿಟಿವಿಯಲ್ಲಿ ಬಯಲಾಯ್ತು ಖದೀಮರ ಕೈಚಳಕ

ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿ ಬೈಕ್ ನ ಡಿಕ್ಕಿಯಲ್ಲಿ ಇಟ್ಟಿದ್ದನ್ನ ಮೂರು ಲಕ್ಷ ಹಣವನ್ನ ಖದೀಮರು ಸದ್ದಿಲ್ಲದೇ ಎಗರಿಸಿರೋ ಘಟನೆ ಹಾಸನದಲ್ಲಿ ನಡೆದಿದೆ.

ನಗರದ ಸಂಪಿಗೆ ರಸ್ತೆಯಲ್ಲಿರುವ ಐಡಿಬಿಐ ಬ್ಯಾಂಕ್ ನಿಂದ ನಾಗೇಶ್ ಎಂಬುವರು ಹಣ ಡ್ರಾ ಮಾಡಿಕೊಂಡು ಹೆಲ್ಮೆಟ್ ಹೊರಗಿಟ್ಟು ಡಿಕ್ಕಿಯಲ್ಲಿದ್ದ ಹಣ ಇಡುವ ವೇಳೆ ಎಲ್ಲಾ ಚಲನ ವಲನ ಗಮನಿಸಿದ ಖದೀಮರು ಈ ಕೃತ್ಯ ಎಸಗಿದ್ದಾರೆ. ನಾಗೇಶ್ ಅವರನ್ನ ಕಳ್ಳರು ಹಿಂಬಾಲಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆ ಸಂಭಂದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ.

Leave a Reply

Your email address will not be published.