ಮತದಾರರಿಗೆ ಮಂಗಗಳ ಕಾಟ : ಕೋತಿಗಳ ಸೈನ್ಯದಿಂದ ಬೇಸತ್ತ ಮತದಾರರು

ರಾಣೆಬೆನ್ನೂರು ತಾಲ್ಲೂಕಿನ ಗುಡಗೂರು ಗ್ರಾಮದಲ್ಲಿರುವ ಮತಗಟ್ಟೆಯ ಬಳಿ ಮತದಾರರಿಗೆ ಮಂಗಗಳ ಕಾಟ ಹೆಚ್ಚಾಗಿದ್ದು, ಮತದಾರರು ಮಂಗಗಳ ಸೈನ್ಯದಿಂದ ಬೇಸತ್ತು ಹೋಗಿದ್ದಾರೆ.

ಹೌದು.. ೫೦ ಕ್ಕೂ ಹೆಚ್ಚು ಮಂಗಗಳು ಮತಗಟ್ಟೆಯ ಸುತ್ತು ಆವರಿಸಿದ್ದು, ಮತದಾರರು ಭಯಭೀತಿಯಿಂದಲೇ ಮತಗಟ್ಟೆಗೆ ಆಗಮಿಸುವಂತಾಗಿದೆ. ರಾಣೆಬೆನ್ನೂರು ತಾಲ್ಲೂಕಿನ ಗುಡಗೂರು ಗ್ರಾಮದಲ್ಲಿರುವ ಮತಗಟ್ಟೆಯ ಬಳಿ ಮತಗಟ್ಟೆ ಸಂಖ್ಯೆ ,19, 20 ರಲ್ಲಿ ಮತಚಲಾವಣೆಗೆ ಬರುತ್ತಿರುವ ಮತದಾರರಿಗೆ ಮಂಗಳು ತೊಂದರೆ ಕೊಡುತ್ತಿವೆ. ಇದರಿಂದ ಭಯಗೊಂಡ ಮತದಾರರು ಮತಚಲಾಯಿಸಲು ಆಗಮಿಸುತ್ತಿಲ್ಲ.

ಆಗೊಬ್ಬ ಇಗೊಬ್ಬ ಮತ ಚಲಾವಣೆಗೆ ಮತದಾರರು ಬರುತ್ತಿದ್ದಾರೆ. ಮತದಾರರಿಗೆ ಮಾತ್ರವಲ್ಲದೇ ಸಿಬ್ಬಂದಿಗಳಿಗೂ ಮಂಗಗಳ ಕಾಟ ಹೆಚ್ಚಾಗಿದೆ.

Leave a Reply