ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿಗಳು : ಕುಟುಂಬಸ್ಥರ ಜೊತೆ ಬಿಜೆಪಿ ಕಾರ್ಯಕರ್ತನ ಹತ್ಯೆ

ಮಹಾರಾಷ್ಟ : ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಕಾರ್ಯಕರ್ತರ ಕಗ್ಗೊಲೆಗಳು ಹೆಚ್ಚಾಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ  ಬಿಜೆಪಿ ಕಾರ್ಯಕರ್ತನೊಬ್ಬನ ಶವ ಪತ್ತೆಯಾದ ಘಟನೆ ಮಾಸುವ ಮುನ್ನವೇ ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ಆತನ ಕುಟುಂಬಸ್ಥರನ್ನು ಹತ್ಯೆ ಮಾಡಲಾಗಿದೆ.

ನಾಗ್ಪುರದ ಆರಾಧನಾ ನಗರದಲ್ಲಿರುವ ಮನೆಯಲ್ಲಿ ಬಿಜೆಪಿ ಕಾರ್ಯಕರ್ತ ಕಮಲಾಕರ್ ಮತ್ತು ಆತನ ಕುಟುಂಬಸ್ಥರು ಮಲಗಿದ್ದರು. ಈ ವೇಳೆ ಏಕಾಏಕಿ ದಾಳಿ ನ ಡೆಸಿದ ದುಷ್ಕರ್ಮಿಗಳು ನಾಲ್ವರನ್ನೂ ಹತ್ಯೆ ಮಾಡಿದ್ದಾರೆ.

ರಕ್ತಸಿಕ್ತರಾಗಿ ಬಿದ್ದಿದ್ದ ಐವರ ಶವಗಳು ಪತ್ತೆಯಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪರೀಶಿಲನೆ ನಡೆಸಿದ್ದಾರೆ. ಈ ಕೊಲೆಯನ್ನು  ಕೌಟುಂಬಿಕ ಕಲಹ ಹಿನ್ನೆಲೆ ಸಂಬಂಧಿಕರೇ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply