ಮ್ಯಾನ್‌ಹೋಲ್‌ಗೆ ಪೌರ ಕಾರ್ಮಿಕ ಇಳಿದ ಪ್ರಕರಣ : ದೂರು ದಾಖಲು..

ಮೈಸೂರು: ಮ್ಯಾನ್ ಹೋಲ್ ಗೆ ಪೌರ ಕಾರ್ಮಿಕ ಇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರಭಾ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳು ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೆಡಿ ಪ್ರಭಾ ಅವರಿಗೆ ತಾಲೂಕು ಪಂಚಾಯಿತಿ ಇಒ, ಟಿ.ಎಸ್.ಡಬ್ಲ್ಯೂ ಸಾಥ್‌ ನೀಡಿದರು.
ಮ್ಯಾನ್ ಹೋಲ್ ಶುಚಿಗೊಳಿಸಲು ಪೌರ ಕಾರ್ಮಿಕನೋರ್ವನನ್ನು  ಚಾಮುಂಡಿ ಬೆಟ್ಟ ಗ್ರಾಮ ಪಂಚಾಯತ್  ಅಧ್ಯಕ್ಷೆ ಎಸ್.ಗೀತಾ ದರ್ಪದಿಂದ  ಮ್ಯಾನ್ ಹೋಲ್ ಒಳಗೆ ಇಳಿಸಿದ ಘಟನೆ ನಡೆದಿದ್ದು, ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.
ಇತಿಹಾಸ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ ಈ ಹೀನ ಘಟನೆ ನಡೆದಿದ್ದು, ಅಧ್ಯಕ್ಷರ ಮನೆ ಮುಂದೆ ಕಟ್ಟಿಕೊಂಡ ಮ್ಯಾನ್ ಹೋಲ್ ಶುಚಿ ಮಾಡಲು ಪೌರಕಾರ್ಮಿಕನನ್ನು ಒತ್ತಾಯಪೂರ್ವಕವಾಗಿ ಕೆಳಗೆ ಇಳಿಸಲಾಗಿತ್ತು. ಮ್ಯಾನ್‌ಹೋಲ್‌ಗೆ ಇಳಿಯದೇ ಇದ್ದರೆ ಪೌರ ಕಾರ್ಮಿಕನನ್ನು ಕೆಲಸದಿಂದ ವಜಾ ಮಾಡುವ ಬೆದರಿಕೆಯೊಡ್ಡಿ ಆತನಿಂದ ಕೆಲಸ ಮಾಡಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಅಧ್ಯಕ್ಷೆ  ಮನೆ ಮುಂದೆ ಮ್ಯಾನ್ ಹೋಲ್ ಶುಚಿ ಮಾಡಲು ಪೌರ ಕಾರ್ಮಿಕ ಗಣೇಶ್ ಎಂಬವರನ್ನು ಬಳಸಿಕೊಳ್ಳಲಾಗಿತ್ತು.

Comments are closed.