ನೆರೆ ಸಂತ್ರಸ್ತರ ಪರಿಹಾರ ತಾರತಮ್ಯ – ಕಾರಜೋಳ ಮನೆಗೆ ಮುತ್ತಿಗೆ : ಹೋರಾಟಗಾರರ ಬಂಧನ

ನೆರೆ ಸಂತ್ರಸ್ತರ ಪರಿಹಾರ ತಾರತಮ್ಯ ಪ್ರಶ್ನಿಸಿ ಮುಧೋಳ ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರೂ ಸ್ಪಂದಿಸದ ಡಿಸಿಎಂ ಗೋವಿಂದ ಕಾರಜೋಳ ಮನೆಗೆ ಮುತ್ತಿಗೆ ಹಾಕಲು ಮುಂದಾದ ಹೋರಾಟಗಾರರನ್ನು ದೌರ್ಜನ್ಯದಿಂದ ಪೊಲೀಸರು ಬಂಧಿಸಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಡಿಸಿಎಂ ಕಾರಜೋಳಗೆ ಮನವಿಸಲ್ಲಿಸಿದಾಗ ಸ್ಪಂದಿಸದಿದ್ದಕ್ಕೆ ಕಾರಜೋಳ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಹೋರಾಟಗಾರರು…

ನೆರೆಗೆ ಬಿದ್ದ ಮನೆ ಮರು ಸರ್ವೇ ಮಾಡಿದ್ರೂ ಕಂಪ್ಯೂಟರ್ ಲಾಗಿನ್ ಬಂದ್ ಆಗಿದ್ದಕ್ಕೆ ಪರಿಹಾರ ಬಾರದೇ ಕಂಪ್ಯೂಟರ್ ಲಾಗಿನ್ ಪುನಃ ಆರಂಭಿಸಿ ಪರಿಹಾರ ಕೊಡುವಂತೆ ಸಂತ್ರಸ್ತರೊಂದಿಗೆ ಮುತ್ತಿಗೆ ಹಾಕಲು ಹೋರಾಟಗಾರರು ಮುಂದಾಗಿದ್ದರು.

ಈ ವೇಳೆ ಮುಧೋಳ ನಗರದ ಪ್ರವಾಸಿ ಮಂದಿರದಲ್ಲಿ ಮೊದಲು ಪ್ರತಿಭಟಿಸಿದ್ದ ಹೋರಾಟಗಾರರ ಮೇಲೆ ಪೊಲೀಸರು ದೌರ್ಜನ್ಯ ಆರೋಪ ಮಾಡಿದ್ದು, ಪೊಲೀಸರು ಲಾಠಿಯಿಂದ ಹೊಡಿಬಡಿ ಮಾಡಿ ಐವರನ್ನು ಬಂಧಿಸಿ ಕರೆದೊಯ್ದಿದ್ದಾರೆಂದು ಆರೋಪಿಸಲಾಗಿದೆ.