ಎಂದೂ ಕೇಳಿ ಕಂಡರಿಯದ ಉಪವಾಸ : ನೀರು ಉಪವಾಸದ ಬಗ್ಗೆ ನಿಮಗೆಷ್ಟು ಗೊತ್ತು…?

ನೀವು ಅದೆಂಥೆಂಥ ಉಪವಾಸ ಮಾಡಿಲ್ಲ. ನೋಡಿಲ್ಲ. ಆದರೆ ನೀವು ನೀರು ಉಪವಾಸ ನೋಡಿದ್ದೀರಾ..? ಕೇಳಿದ್ದೀರಾ…? ಈ ಉಪವಾಸವನ್ನು ನೀರು ಕುಡಿದು ಮಾಡಬೇಕಾ…? ಅಂಥ ಥಟ್ ಅಂತ ನೀವು ಹೇಳಿಬಿಟ್ಟಿರ್ತೀರಾ. ಹೀಗೆಂದಿದ್ದರೆ ನಿಮ್ಮ ಊಹೆ ಖಂಡಿತ ನಿಜ. ಏನಿದು ನೀರು ಉಪವಾಸ..? ಇದನ್ನ ಮಾಡುವುದರಿಂದ ಆಗುವು ಪ್ರಯೋಜನಗಳೇನು..? ಇದಕ್ಕುತ್ತರ ಇಲ್ಲಿದೆ ನೋಡಿ ಉತ್ತರ.

ನೀರು ಉಪವಾಸ ಎಂದರೆ ಇಡೀ ದಿನ ನೀರನ್ನು ಬಿಟ್ಟು ಬೇರೇನು ಸೇವಿಸಿದೇ ಇರುವುದು. ನೀರಿನ ಉಪವಾಸದಿಂದ ಏನು  ಉಪಯೋಗ? ಹೇಗೆ ಮಾಡುವುದು ತಿಳಿಯೋಣ.

ನೀರು ಉಪವಾಸ ಮಾಡುವುದರಿಂದ ಪ್ರಮುಖ ಪ್ರಯೋಜನ ಅಂದರೆ ಅದು ಜೀರ್ಣಾಂಗಗಳಿಗೆ ವಿರಾಮ ನೀಡಿ ದೇಹವನ್ನ ಚಲನಶೀಲತೆಯಿಂದ ಕೂಡಿರಲು ಸಹಾಯ ಮಾಡುವುದು.

ನಿಮಗೆ ಒಳ್ಳೆಯದು : ದೇಹದ ಎಲ್ಲಾ ಜೀವಿಗಳು ಹೊಸದಾಗಿ ಹುಟ್ಟಿಕೊಳ್ಳಲು ಸಹಕಾರಿಯಾಗುವಲ್ಲಿ ಇದು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ತೂಕ ಇಳಿಕೆಗೆ ಇದನ್ನು 15 ದಿನಕ್ಕೊಮ್ಮೆ ಮಾಡಬಹುದು.

ಯಾರೆಲ್ಲಾ ನೀರು ಉಪವಾಸ ಅನುಸರಿಸಬೇಕು ; ಮಕ್ಕಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ಅನುಸರಿಸಬಹುದು.

ಯಾರೆಲ್ಲಾ ಅನುಸರಿಸಬಾರದು :ಮಧುಮೇಹಿಗಳು, ಗರ್ಭಿಣಿಯರು, ಮಕ್ಕಳು, ಅನಾರೋಗಿಗಳು ಮಾಡಬಾರದು. ಹಳೆಯ ಜೀವ ಕೋಶಗಳು ಹುಟ್ಟುವ ಕ್ರೀಯೆಗೆ ಈ ಉಪವಾಸ ತುಂಬಾ ಒಳಿತು. 60ರ ಬಳಿಕ ಮೆದುಳಿನ ಜೀವಕೋಶಗಳು ಹೊಸದಾಗಿ ಹುಟ್ಟುವಲ್ಲಿ ನಿಧಾನವಾದರೆ ಈ ಕ್ರಮ ಅನುಸರಿಸಬಹುದು.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ : ಈ ತೊಂದರೆಯಿಂದ ಬಳಲುವವರು ವೈದ್ಯರ ಸಲಹೆ ಪಡೆದು ನೀರು ಉಪವಾಸ ಪಾಲಿಸಬಹುದು.

ಹೃದಯ ಸಂಬಂಧಿ ಸಮಸ್ಯೆ ನಿವಾರಣೆ : ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ. ಇದರಿಂದ ಹೃದಯದ ಮಟ್ಟ ಸುಧಾರಣೆಯಾಗುತ್ತದೆ. ಆಲಸ್ಯತನ ಕಡಿಮೆ ಮಾಡಿ ಚಲನಶೀಲರನ್ನಾಗಿಸುವಲ್ಲಿ ಇದು ತುಂಬಾನೇ ಉಪಯೋಗಕಾರಿ. ಯಾವುದಕ್ಕೂ ನೀವು ಒಂದು ಬಾರಿ ಅನುಸರಿಸಿ ನೋಡಿ ಆಯ್ಕೆ ಮಾತ್ರ ನಿಮಗೆ ಬಿಟ್ಟಿದ್ದು.

Leave a Reply