ಹೊಸ ವರ್ಷಾಚರಣೆಗೆ ರಾಹುಲ್ ಹೋಗಿದ್ದು ಎಲ್ಲಿಗೆ..?

ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಲಂಡನ್‌ಗೆ ತೆರಳಿದ್ದಾರೆಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಖಚಿತ ಮಾಹಿತಿಯಿಲ್ಲ ಇಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿ ಪ್ರತಿ ಬಾರಿ ವಿದೇಶಕ್ಕೆ ಹೋಗುವಾಗ ಟ್ವಿಟ್ಟರ್ ನಲ್ಲಿ ಒಂದು ಸಂದೇಶವನ್ನು ಹಾಕಿ ಹೋಗುತ್ತಿದ್ದರು. ಆದರೆ ಬುಧವಾರವೇ ಯಾರಿಗೂ ಮಾಹಿತಿ ನೀಡದೇ ಲಂಡನ್‌ಗೆ ತೆರಳಿದ್ದು, ಖಾಸಗಿ ಭೇಟಿಗಾಗಿ ಹೋಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ತಮ್ಮ ವಿದೇಶ ಪ್ರವಾಸಕ್ಕೂ ಮುನ್ನ ರಾಹುಲ್‌ ಗಾಂಧಿ ನಾನು ಯುರೋಪಕ್ಕೆ ತೆರಳಲಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಟ್ವೀಟ್‌ ಮಾಡಿದ್ದರು. ಆದರೆ ಈಗ ಯಾಕೆ ಟ್ವೀಟ್ ಮಾಡಿಲ್ಲ ಎಂಬುದು ಕುತೂಹಲಕಾರಿ ವಿಷಯವಾಗಿದೆ.

ಇನ್ನೂ ಹೊಸ ವರ್ಷ ಲಂಡನ್ ನಲ್ಲಿಯೇ ಆಚರಣೆ ಮಾಡಲಿದ್ದಾರೆ ಎನ್ನಲಾಗುತ್ತಿದ್ದು, ಲಂಡನ್ ಇಂದಲೇ ಭಾರತೀಯರಿಗೆ ಹೊಸ ವರ್ಷದ ಶುಭಾಷಯ ತಿಳಿಸುತ್ತಾರೆ ಎನ್ನಲಾಗುತ್ತಿದೆ.ಇತ್ತ ಅವರು ವಿದೇಶಕ್ಕೆ ತೆರಳಿರುವ ವಿಷಯವನ್ನು ಕಾಂಗ್ರೆಸ್‌ ನಿರಾಕರಿಸಿದ್ದು, ಹೊಸ ವರ್ಷದ ನಂತರ ರಾಹುಲ್‌ ವಿದೇಶಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಹೇಳುತ್ತಿದ್ದಾರೆ.

ಒಟ್ಟಾರೆ ನೋಟ್ ಬ್ಯಾನ್ ಆದ ಬಳಿಕ ದೇಶವನ್ನುದ್ದೇಶಿಸಿ ಮೋದಿ ಮಾತನಾಡುತ್ತಿದ್ದರೆ ನೋಟ್ ಬ್ಯಾನ್ ವಿರೋಧಿಸುತ್ತಿರುವ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿರುವುದು ಬಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Comments are closed.