ನಿರ್ಭಯಾ ಅತ್ಯಾಚಾರಿಗಳಿಗೆ ಫೆ.1ಕ್ಕೆ ಗಲ್ಲು : ಹೈಕೋರ್ಟ್‌ನಿಂದ ಹೊಸ ವಾರಂಟ್‌ ಜಾರಿ

ನಿರ್ಭಯಾ ಅತ್ಯಾಚಾರಿಗಳನ್ನು ಫೆ.1ರ ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕು ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ಹೊಸ ವಾರಂಟ್‌ ಜಾರಿ ಮಾಡಿದೆ.

ಇದೇ 22ರಂದು ನಿಗದಿಯಾಗಿದ್ದ ಮರಣ ದಂಡನೆಯನ್ನು ಮುಂದೂಡುವಂತೆ ಕೋರಿ ನಾಲ್ವರು ಅಪರಾಧಿಗಳ ಪೈಕಿ ಮುಕೇಶ್‌ ಕುಮಾರ್‌ ಸಿಂಗ್‌ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದ. ಈ ಮಧ್ಯೆ ರಾಷ್ಟಪತಿಗಳು ಮುಕೇಶ್‌ನ ಕ್ಷಮಾದಾನದ ಅರ್ಜಿ ತಿರಸ್ಕರಿಸಿದ್ದರು. ಅಲ್ಲದೆ, ಗಲ್ಲು ಶಿಕ್ಷೆ ಜಾರಿಗೆ ಹೊಸ ದಿನಾಂಕ ನಿಗದಿ ಮಾಡುವಂತೆ ಕೋರಿ ತಿಹಾರ್‌ ಜೈಲು ಅಧಿಕಾರಿಗಳು ದೆಹಲಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

https://twitter.com/ANI/status/1218130208831623169?ref_src=twsrc%5Etfw%7Ctwcamp%5Etweetembed%7Ctwterm%5E1218130208831623169&ref_url=https%3A%2F%2Fm.dailyhunt.in%2Fnews%2Findia%2Fkannada%2Fprajavani-epaper-praj%2Fnirbhaya%2Batyaachaarigalige%2Bfe%2B1randu%2Bgallu-newsid-159879200

ನಿಯಮಗಳ ಪ್ರಕಾರ ಅಪರಾಧಿಯ ಕ್ಷಮಾದಾನದ ಅರ್ಜಿ ತಿರಸ್ಕಾರಗೊಂಡ ಎರಡು ವಾರಗಳ ನಂತರ ಆತನಿಗೆ ಗಲ್ಲು ಜಾರಿಗೊಳಿಸಬೇಕು. ಇದೇ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಫೆ. 1ಕ್ಕೆ ಗಲ್ಲು ಶಿಕ್ಷೆ ನಿಗದಿಗೊಳಿಸಿದ್ದಾರೆ.

ಅದರಂತೆ ಫೆ. 1ರಂದು ವಿನಯ್‌ ಶರ್ಮಾ, ಮುಕೇಶ್‌ ಸಿಂಗ್‌, ಅಕ್ಷಯ್‌ ಕುಮಾರ್‌ ಸಿಂಗ್‌ ಮತ್ತು ಪವನ್‌ ಗುಪ್ತಾನನ್ನು ನೇಣಿಗೇರಿಸಲಾಗುತ್ತದೆ.

ದೆಹಲಿಯ ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ನಿರ್ಭಯಾಳನ್ನು 2012ರ ಡಿ. 16ರಂದು ಚಲಿಸುವ ಬಸ್‌ನಲ್ಲೇ ಅತ್ಯಾಚಾರ ಮಾಡಿದ್ದ ದುಷ್ಕರ್ಮಿಗಳು ಆಕೆಯ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದರು. ಚಿಕಿತ್ಸೆ ಫಲಿಸದೇ ಡಿ. 29ರಂದು ನಿರ್ಭಯಾ ಕೊನೆಯುಸಿರೆಳೆದಿದ್ದರು.