ಸ್ವಚ್ಛತೆ ಬಗ್ಗೆ ನೋ ಟೆನ್ಷನ್ – ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳಿಂದ ‘ಬಸಣ್ಣಿ’ ಡ್ಯಾನ್ಸ್

ಒಂದೆಡೆ ಕೊರೊನಾ ಕುರಿತು ಹುಬ್ಬಳ್ಳಿಯ ಕಿಮ್ಸ್ ವೈದ್ಯರು ತಲೆ ಕೆಡಿಸಿಕೊಂಡಿದ್ದರೆ ಮತ್ತೊಂದೆಡೆ ಕಿಮ್ಸ್ ಆಯಾಗಳು ಭರ್ಜರಿ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಹುಬ್ಬಳ್ಳಿಯಲ್ಲಿ ಕೊರೊನಾ ಎಫೆಕ್ಟ್‌ ಎಷ್ಟಿದೆ ಅಂದ್ರೆ ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ರೈಲು ನಿಲ್ದಾಣಗಳು , ಬಸ್ ಸ್ಟ್ಯಾಂಡ್ ಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ. ರಸ್ತೆಗಳು ಜನರಿಲ್ಲದೆ ಸೊರಗಿವೆ. ಜನ ಮನೆ ಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ಕೊರೊನಾ ರೋಗ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ದಾಖಲಾಯಿಸಿ ಚಿಕಿತ್ಸೆ ಪಡೆಯುವಲ್ಲಿ ನಿರತರಾಗಿದ್ದಾರೆ. ಸರ್ಕಾರ ಕೂಡ ಜನ ಸೇರುವ ಸ್ಥಳಗಳಿಗೆ ನಿರ್ಬಂಧ ಹೇರಿದೆ.

ರೈಲು, ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದ್ದು ಕೆಲಸವಿಲ್ಲದೆ ರೈಲ್ವೇ ಕೂಲಿಗಳು ಖಾಲಿ ಕುಳಿತಿದ್ದಾರೆ. ಜನರು ಬರದೆ ಆಟೋ ಚಾಲಕರು ನಿರುದ್ಯೋಗಿಗಳಾಗಿದ್ದಾರೆ. ಜನ ಶತಾಬ್ದಿ, ಇಂಟರ್‌ ಸಿಟಿ, ಚೆನ್ನಮ್ಮ ಎಕ್ಸ್‌ಪ್ರೆಸ್ ಟ್ರೈನ್‌ಗಳು ಖಾಲಿಖಾಲಿಯಾಗಿವೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಕೊರೊನಾ ಸಹಾಯವಾಣಿ ಸ್ಥಾಪನೆ ಮಾಡಿ ಆರೋಗ್ಯ ಇಲಾಖೆ, ರೈಲ್ವೇ ಆಸ್ಪತ್ರೆ, ಧಾರವಾಡ ಜಿಲ್ಲಾಡಳಿತದಿಂದ ಕೊರೊನಾ ಕುರಿತು ಜನಜಾಗೃತಿ ಮೂಡಿಸುತ್ತಿವೆ. ಇದರ ನಡುವೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳು ಆಸ್ಪತ್ರೆಯ ಸ್ವಚ್ಚತೆಯ ಕಡೆಗೆ ಗಮನ ಹರಿಸದೇ ಡಿಜೆ ಹಾಡಿಗೆ ಡ್ಯಾನ್ಸ್ ಮಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.

ಹೌದು… ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಹೆರಿಗೆ ವಾಡ್೯ ಪಕ್ಕ ಆಯಾ ಹಾಗೂ ಸುಪರವೈಸರ್ ನಿಂದ ಡ್ಯಾನ್ಸ್ ಮಾಡಲಾಗಿದೆ.  ಆಸ್ಪತ್ರೆಯಲ್ಲೆ “ಬಸಣ್ಣಿ ಬಾ” ಹಾಡಿಗೆ ಆಯಾಗಳು ಹಾಗೂ ಸುಪರ್ ವೈಸರ್‌ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಕಿಮ್ಸ್ ನ‌ ಸಿಬ್ಬಂದಿ ವರ್ತನೆಗೆ ಜನರು ಆಕ್ರೋಶ ಹೊರಹಾಕಿದ್ದಾರೆ. ಕಿಮ್ಸ್ ಆಸ್ಪತ್ರೆ ಸ್ವಚ್ಛತೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕುಣಿದಾಡಿದ್ದಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗಿದೆ.

ಇಂಥಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.