ಉತ್ತರ ಕೊರಿಯಾದಲ್ಲಿ ಅಣ್ವಸ್ತ್ರ ಪರೀಕ್ಷೆಗೆ 200 ಕಾರ್ಮಿಕರ ಬಲಿ ?

ಟೋಕಿಯೋ : ಉತ್ತರ ಕೊರಿಯಾ ಸತತವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿದ್ದು, ಇದರ ಪರಿಣಾಮ 200 ಮಂದಿ ಸಾವಿಗೀಡಾಗಿರುವುದಾಗಿ ಜಪಾನ್‌ ಮಾಧ್ಯಮವೊಂದು ವರದಿ ಮಾಡಿದೆ.

ಉತ್ತರ ಕೊರಿಯಾ ವಿಶ್ವದ ರಾಷ್ಟ್ರಗಳಿಗೆ ಸೆಡ್ಡು ಹೊಡೆದು ಸತತವಾಗಿ ಪರಮಾಣು ಪರೀಕ್ಷೆ ನಡೆಸುತ್ತಲೇ ಇದೆ. ಇತ್ತೀಚೆಗೆ ಅಣ್ವಸ್ತ್ರ ಪರೀಕ್ಷೆ ನಡೆಸಿದ ಬಳಿಕ ಸುರಂಗವೊಂದು ಕುಸಿದಿದ್ದು, 200 ಮಂದಿ ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.

ಸೆಪ್ಟಂಬರ್‌ನಲ್ಲಿ ಉತ್ತರ ಕೊರಿಯಾ 23 ಕಿ.ಮೀ ನೆಲದಾಳದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು. ಅಣ್ವಸ್ತ್ರ ಪರೀಕ್ಷೆ ನಡೆಸುವ ಸಲುವಾಗಿ ಸುರಂಗ ಕೊರೆಯಲಾಗಿತ್ತು. ಸುರಂಗವೊಂದರಲ್ಲಿ 200ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿರುವ ವೇಳೆ ಸುರಂಗ ಕುಸಿದಿದ್ದು, ಈ ವೇಳೆ 200 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ನೆಲದಾಳದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಪರಿಣಾಮ ಪರ್ವತಗಳು ಕುಸಿಯುವ ಹಾಗೂ ವಿಕಿರಣ ಸೋರಿಕೆಯಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಸಲಾಗಿದೆ.

 

 

Leave a Reply