ಚೀನಾದ ವುಹಾನ್‌ ಪ್ರಾಂತ್ಯದ ವ್ಯಕ್ತಿ ಜೀವಂತ ಬಾವುಲಿ ತಿಂದ ದೃಶ್ಯ ವೈರಲ್…

ಚೀನಾದ ವುಹಾನ್ ಪ್ರಾಂತ್ಯದ ಹೆಸರು ಕೇಳಿದ್ರೆ ತಕ್ಷಣಕ್ಕೆ ನೆನಪಾಗೋದು ಕೊರೊನಾ ವೈರಸ್. ಆದರೆ ಇಲ್ಲಿ ಮತ್ತೊಂದು ವಿಚಾರ ಸುದ್ದಿಯಾಗಿದೆ. ಅದು ವ್ಯಕ್ತಿಯೊಬ್ಬ ತಟ್ಟೆಯಲ್ಲಿ ಬಾವಲಿಯನ್ನು ತಿನ್ನುತ್ತಿರುವ ದೃಶ್ಯ.

ಹೌದು… ಇತ್ತೀಚೆಗಷ್ಟೆ ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ಬಾವಲಿಯನ್ನು ತಟ್ಟೆಯಲ್ಲಿ ಹಾಕಿಕೊಂಡು ತಿನ್ನುತ್ತಿರುವ ದೃಶ್ಯ ವೈರಲ್​ ಆಗಿತ್ತು. ಇದೀಗ ವ್ಯಕ್ಯಿಯೊಬ್ಬನು ಜೀವಂತ ಇಲಿಮರಿಗಳನ್ನು ಸಾಸ್​ನಲ್ಲಿ ಮುಳುಗಿಸಿಕೊಂಡು ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಚೀನಾದಲ್ಲಿ ಹೊಸದಾಗಿ ಪತ್ತೆಯಾಗಿರುವ ಕೊರೊನಾ ವೈರಸ್​ ಅತಿವೇಗದಲ್ಲಿ ಹರಡುತ್ತಾ ನೂರಾರು ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ಈ ನಡುವೆ ಚೀನಾದ ವ್ಯಕ್ಯಿಯೊಬ್ಬ ಜೀವಂತ ಇಲಿಮರಿಗಳನ್ನು ಸಾಸ್​ನಲ್ಲಿ ಮುಳುಗಿಸಿಕೊಂಡು ತಿನ್ನುತ್ತಿರುವ ವಿಡಿಯೋ ಸುದ್ದಿಯಾಗಿದೆ. ಜೀವಂತ ಇಲಿ ಮರಿಗಳನ್ನು ಹಿಡಿದು, ಸಾಸ್ ನಲ್ಲಿ ಅದ್ದಿ, ಜಗಿದು ನುಂಗುತ್ತಿದ್ದಾನೆ ಈತ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಇದಕ್ಕೆ ಪ್ರತಿಕ್ರಿಯೆಗಳೂ ಸಾಕಷ್ಟು ಬರುತ್ತಿವೆ.