OMG : ಬೆಂಕಿಯಿಂದ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ…!

ಕೊಪ್ಪಳದ ಕುಕನೂರಿನ ಹೊರವಲಯದಲ್ಲಿ ಬೆಂಕಿಯಿಂದ ಅರ್ಧಂಬರ್ಧ ಸುಟ್ಟ ಸ್ಥಿತಿಯ ವ್ಯಕ್ತಿಯ ಶವ ಪತ್ತೆಯಾಗಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ಬಳಗೇರಿ ಗ್ರಾಮದ ಮಹಮದ್‌ರಫಿ ಕಲ್ಲೂರು (22) ಮೃತ ವ್ಯಕ್ತಿ. ಈತ ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಿ ಬೈಕ್ ತೆಗೆದುಕೊಂಡು ಹೊರಗಡೆ ಬಂದಿದ್ದನು. ಹೊರಗಡೆ ಹೋದ ಯುವಕ ಶವವಾಗಿ ಕುಕನೂರಿನ ಕೊಪ್ಪಳ ರಸ್ತೆಯ ಹೊರವಲಯದ ಹೊಲವೊಂದರಲ್ಲಿ ಬೆಳಗ್ಗೆ ಪತ್ತೆಯಾಗಿದ್ದಾನೆ. ಈತನ ಶವದ ಕೂಗಳತೆಯಲ್ಲಿ ದೂರದಲ್ಲಿ ಈತನ ಬೈಕ್, ಪರ್ಸ್, ಮೊಬೈಲ್, ಚಪ್ಪಲಿ ಬಿದ್ದಿವೆ.

ಆತ್ಮಹತ್ಯೆಯೊ? ಕೊಲೆಯೊ? ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.