Coronavirus : ರಾಜ್ಯದಲ್ಲಿ ಲಕ್ಷ ಮಂದಿಗೆ ಕೊರೋನಾ ಸೋಂಕು ಸಾಧ್ಯತೆ – ಎಚ್ಚರ ಎಚ್ಚರ…

ಮುಂದಿನ ದಿನಗಳಲ್ಲಿ ಮಾರಕ ಕೊರೊನಾ ಸೋಂಕಿತರ ಸಂಖ್ಯೆಯಲ್ಲ ಭಾರೀ ಪ್ರಮಾಣದ ಎಚ್ಚರಿಕೆಯ ಅಂದಾಜಿದೆ ಎಂದು ಹೇಳಲಾಗುತ್ತಿದೆ ಮುಂಬರುವ ದಿನಗಳಲ್ಲಿ ಸೋಂಕಿತರ ಸಂಖ್ಯೆ ಲಕ್ಷದ ಆಸುಪಾಸಿಗೆ ಏರುವ ಆತಂಕ ಇದೆ. ಹೀಗಾಗಿ ಸರಕಾರ ಸಮರೋಪಾದಿಯಲ್ಲಿ ಕ್ರಮಕ್ಕೆ ಮುಂದಾಗಿದೆ.

ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸುಮಾರು 20 ಸಾವಿರ ಕೊಟೆಲು ರೂಮುಗಳನ್ನು ವಶಕ್ಕೆ ಪಡೆದು ತಾತ್ಕಾಲಿಕ ವಾರ್ಡ್‌‌ಗಳನ್ನಾಗಿ ಪರಿವರ್ತಿಸುವ ಉದ್ದೇಶ ಸರಕಾರಕ್ಕೆ ಇದೆ.

ಇದೇ ರೀತಿ ಸುಮಾರು 2 ಸಾವಿರ ವೆಂಟಿಲೇಟರುಗಳ ಖರೀದೆಗೆ ಈಗಾಗಲೇ ಸರಕಾರ ತೀರ್ಮಾನ ಮಾಡಿದೆ. ಸದ್ಯ ರಾಜ್ಯದಲ್ಲಿ 700 ವೆಂಟಿಲೇಟಟರುಗಳು ಲಭ್ಯವಿದೆ.

ಕರೋನಾ ವೈರಾಣು ಸೋಂಕು ತಡೆಯಲು ಸರಕಾರದ ಕ್ರಮಗಳು ಸೂಕ್ತವಾಗಿದ್ದವೂ ಜನಸ್ಪಂದನೆ ನಿರಾಶಾಸಾಯಕವಾಗಿದೆ ಎಂದು ಖ್ಯಾತ ವೈದ್ಯ ದೇವಿ ಶೆಟ್ಟಿ ವಿಷಾದಿಸಿದ್ದಾರೆ.

ಜನರು ಈ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅದು ಸಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೇ ರಾಜ್ಯದಲ್ಲೇ ಸೋಂಕಿತರ ಸಂಖ್ಯೆ 80 ಸಾವಿರದಿಂದ ಒಂದು ಲಕ್ಷ ತಲುವಪು ಸಾಧ್ಯತೆ ಇದೆ ಎಂದಿದ್ದಾರೆ.

ಈ ಪೈಕಿ ಸುಮಾರು 20 ಸಾವಿರ ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡುಯಬೇಕಾಗಿ ಬಂದರೇ ಕನಿಷ್ಟ 2.5 ಸಾವಚಿರ ಮಂದಿಗೆ ತುರ್ತು ಚಿಕಿತ್ಸೆ ಅಗತ್ಯ ಎದಿರಾಗಬಹುದು ಎಂದು ದೇವಿ ಶೆಟ್ಟಿ ಹೇಳಿರುವುದಾಗಿ ಮನಿ ಕಂಟ್ರೋಲ್ ಡಾಟ್ ಕಾಂ ವರದಿ ಮಾಡಿದೆ.

ಈ ಮಧ್ಯೆ ರಾಜ್ಯಾದ್ಯಂತ ವಿಧಿಸಲಾಗಿರುವ ನಿರ್ಬಂಧವನ್ನು ಜನ ಕಟ್ಟುನಿಟ್ಟಾಗಿ ಪಾಲಿಸಬೇಕು. ಅನಗತ್ಯವಾಗಿ ತಿರುಗಾಡುವವರನ್ನು ಪೊಲೀಸರು ಶಿಕ್ಷಿಸಿದರೇ ಅದಕ್ಕೆ ಸರಕಾರ ಹೊಣೆಯಲ್ಲ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.

ಅಷ್ಟೇ ಅಲ್ಲ ಕೋರೊಣಾ ಸೋಂಕಿನ ವಿರುದ್ಧ ಜಾರಿ ಮಾಡಲಾಗಿರುವ ನಿರ್ಬಂಧಗಳಿಂದ ಆರ್ಥಿಕವಾಗಿ ಸಂಕಷ್ಟಕ್ಡಾಕೆ ಈಡಾಗಬಹುದಾದ ಬಡವರಿಗೆ ವಿಶೇಷ ಆರ್ಥಿಕ ಪ್ಯಾಕೇಜನ್ನು ಸಹ ಅವರು ಘೋಷಿಸಿದ್ದಾರೆ.

ಅಲ್ಲದೇ 13.20 ಕೋಟಿ ರೂ ಬಡವರ ಬಂಧು ಯೋಜನೆ ಸಾಲ ಮನ್ನಾ, 21 ಸಾವಿರ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ 1 ಸಾವಿರ ರೂ ಬಿಡುಗಡೆ, ಬಿಪಿಎಲ್ ಕುಟುಂಬಕ್ಕೆ ಎರಡು ತಿಂಗಳ ಪಡಿತರ ಹಂಚಿಕೆ ಮಾಡಲು ತೀರ್ಮಾನಿಸಿದ್ದಾರೆ.