ಪದ್ಮಶ್ರೀ ಪುರಷ್ಕೃತ ಸಂಗೀತ ವಿದ್ವಾಂಸ ರಾ.ಸತ್ಯನಾರಾಯಣ ಇನ್ನಿಲ್ಲ…!

2018ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸಂಗೀತ ವಿದ್ವಾಂಸ ರಾ.ಸತ್ಯನಾರಾಯಣ (93)ಇನ್ನಿಲ್ಲ.

ವಯೋಸಹಕಜ ಕಾಯಿಲೆಯಿಂದ ಬಳಲುತ್ತಿದ್ದ ರಾ.ಸತ್ಯನಾರಾಯಣ ನಿನ್ನೆ ತಡರಾತ್ರಿ ಮೈಸೂರಿನ ಜಯನಗರದ ನಿವಾಸದಲ್ಲಿ ಕೊನೆಯುಸಿರೇಳೆದಿದ್ದಾರೆ. 1927 ಮೇ 9ರಂದು ಜನಿಸಿದ್ದ ರಾ.ಸತ್ಯನಾರಾಯಣ ಅವರು ಕರ್ನಾಟಕ ಸಂಗೀತದಲ್ಲಿ ಮೈಸೂರಿ ಹೆಸರಿಗೆ ಕೀರ್ತಿಗೆ ತಂದಿದ್ದರು.

ರಾಜ್ಯ ಮತ್ತ ರಾಷ್ಟ್ರ ಮಟ್ಟದ ಸಂಗೀತ ನೃತ್ಯ ಕಾರ್ಯಕ್ರಮಗಳಿಂದ ಖ್ಯಾತಿ ಪಡೆದಿದ್ದರು. ಪುತ್ರ ರಾ.ಸ.ನಂದಕುಮಾರ್, ಪುತ್ರಿ ರೋಹಿಣಿ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ರಾ.ಸತ್ಯನಾರಾಯಣರಿಗೆ ಮೈಸೂರು ಪೋಲಿಸರಿಂದ ಸರ್ಕಾರಿ ಗೌರವ ಸಲ್ಲಿಸಲಾಗಿದೆ.

ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಗಿದೆ. ಸಂಜೆ ವೇಳೆಗೆ ಚೆನ್ನಪಟ್ಟಣದ ಬಳಿ ನಿರ್ಮಿಸಿರುವ ರಸರುಷಿ ಪ್ರತಿಷ್ಠಾನ ಸಂಶೋಧನ ಕೇಂದ್ರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಕುಟುಂಬಸ್ಥರು ಆಪ್ತರ ಸಮ್ಮುಖದಲ್ಲಿ ನಡೆಯಲಿರುವ ಅಂತಿಮ ವಿಧಿವಿಧಾನಗಳು ನಡೆಯಲಿವೆ.