“ಅನ್ನದ ಋಣ ಭೂಮಿ ಋಣವನ್ನು ಭಾರತ ಮಾತೆಗೆ ಸಲ್ಲಿಸಿ ಪಾಕಿಸ್ತಾನಕ್ಕಲ್ಲ..”ಪ್ರಜ್ವಲ್ ರೇವಣ್ಣ

ಪಾಕಿಸ್ಥಾನದ ಪರ ಜೈಕಾರ ಕೂಗಿದವರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸುತ್ತೇನೆ. ಪಾಕಿಸ್ಥಾನದ ಪರ ಘೋಷಣೆ ಕೂಗಿದವರ ವಿರುದ್ಧ ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ. ಯಾರೇ ಒಬ್ಬ ವ್ಯಕ್ತಿ ಅನ್ನದ ಋಣ ಭೂಮಿ ಋಣವನ್ನು ಭಾರತ ಮಾತೆಗೆ ಸಲ್ಲಿಸಬೇಕು. ಸರ್ಕಾರ ತಂದಿರುವ ನಿಯಮ ಇಷ್ಟ ಇಲ್ಲ ಅಂದ್ರೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಯಾರೂ ಬೇಡ ಅನ್ನಲ್ಲ. ಆದರೆ ಅದಕ್ಕೆ ಭಾರತ ದೇಶ ಏನು ಮಾಡಿದೆ. ನಮ್ಮನ್ನು ಸಾಕಿ, ಸಲಹಿ ದೊಡ್ಡಮಟ್ಟಕ್ಕೆ ಬದುಕುತ್ತಿರುವುದಕ್ಕೆ ಕಾರಣವಾದ ದೇಶಕ್ಕೆ ಅವಮಾನ ಮಾಡುವ ರೀತಿ ಮಾಡಬಾರದು.

ವೇದಿಕೆ ಮೇಲೆ ಪ್ರಚಾರಕ್ಕಾಗಿ ಮಾತನಾಡಬಾರದು. ಸರ್ಕಾರ ಇಂತವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸುತ್ತೇನೆ. ಅವರು ಯಾವ ಒತ್ತಡದ ಮೇಲೆ ಅಥವಾ ಪ್ರಚಾರಕ್ಕಾಗಿ ಆ ರೀತಿ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಸರಿಯಾದ ರೀತಿ ಈ ಬಗ್ಗೆ ತನಿಖೆಯಾಗಬೇಕು. ಅವಳು ನಿಜವಾಗಿಯೂ ಜಯಕಾರ ಹಾಕಿದ್ದೆ ಆಗಿದ್ದಲ್ಲಿ ತಕ್ಕ ಶಿಕ್ಷೆ ಆಗಬೇಕು. ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ದೇಶಕ್ಕೆ ಅಗೌರವ ತರುವ ಕೆಲಸ ಮಾಡಬಾರದು ಎಂದಿದ್ದಾರೆ.

ಇನ್ನೂ ರಾಜ್ಯದಲ್ಲಿ ನೀರಾ ಮತ್ತು ಕ್ಯಾಸಿನೋ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿರುವ ವಿಚಾರಕ್ಕೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರಜ್ವಲ್ ರೇವಣ್ಣ, ಒಂದು ಕಡೆ ಪ್ರಚಾರ ಮಾಡೋದೆ ಬೇರೆ. ಯೋಜನೆ ತರುತ್ತಿರೋದೆ ಬೇರೆ ಎಂದು ಕಿಡಿಕಾರಿದ್ದಾರೆ.

ಆರ್‌ಎಸ್‌ಎಸ್ ಮಾತು ಮೀರಿ ಬಿಜೆಪಿ ನಡೆಯುತ್ತಿದೆಯೋ ಅಥವಾ ಆರ್‌ಎಸ್‌ಎಸ್ ಮಾತು ಕೇಳದೆ ಬಿಜೆಪಿ ಸರ್ಕಾರ ನಡೆಸುವ ತೀರ್ಮಾನ ತೆಗೆದುಕೊಂಡಿದೆಯಾ ಗೊತ್ತಿಲ್ಲ. ಆರ್‌ಎಸ್ಎಸ್‌ನ ಕಾರ್ಯಕ್ರಮದಂತೆ ಬಿಜೆಪಿ ದೇಶ ಕಟ್ಟುವ ಕಾರ್ಯಕ್ರಮ ಅಳವಡಿಸುತ್ತ ನೋಡಬೇಕಿದೆ. ಮಂತ್ರಿ ಒಂದು ಹೇಳಿಕೆ ಕೊಡೋದು, ಆ ಪಕ್ಷಕ್ಕೆ ಬೆಂಬಲ ಕೊಡುತ್ತ ಬಂದಿರುವ ಸಂಘಟನೆಯ ಚಿಂತನೆ ಎರಡು ಸರಿ ಹೊಂದುತ್ತಿಲ್ಲ ಎಂಬುದು ನನ್ನ ಭಾವನೆ ಎಂದಿದ್ದಾರೆ.

ಯಾವುದೇ ಯೋಜನೆ ತರುವಾಗ ಜನರಿಗೆ, ಬಡವರಿಗೆ ಅನ್ಯಾಯ ಆಗುತ್ತೆ ಎಂಬುದರ ಚಿಂತನೆ ಮಾಡಬೇಕು. ಆರ್ ಎಸ್ ಎಸ್ ಇದನ್ನೆಲ್ಲ ವಿರೋಧಿಸುವ ಸಂಘಟನೆ. ಆರ್‌ಎಸ್‌ಎಸ್‌ನ ಮಾತು ಮೀರಿ ಬಿಜೆಪಿ ತರುತ್ತಿದೆ ಅಂದ್ರೆ ಒಳ್ಳೆ ವಿಶೇಷತನ ಇದೆ ಅನ್ಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ.