ಕಾಂಗ್ರೆಸ್ ಸರ್ಕಾರ ಬರುವುದು ಸೂರ್ಯ ಚಂದ್ರರಿರುವಷ್ಟೇ ಸತ್ಯ : ಪರಮೇಶ್ವರ್

ಹುಬ್ಬಳ್ಳಿ : ‘ ಸರ್ವೆ ರಿಪೋರ್ಟ್ ಎನು ಹೇಳುತ್ತೆ ನನಗೆ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ನಾನ್ ಹೇಳುತ್ತೇನೆ. ರಾಜ್ಯದಲ್ಲಿ ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಮುಂದಿನ ಭಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಅಷ್ಟೆ ಸತ್ಯ ‘ ಎಂದು ಹುಬ್ಬಳ್ಳಿಯ ಬೂತ್ ಮಟ್ಟದ  ಕಾಂಗ್ರೆಸ್ ಸಮಾವೇಶದಲ್ಲಿ ಪರಮೇಶ್ವರ ಹೇಳಿಕೆ ನೀಡಿದ್ದಾರೆ. ಇನ್ನು 210 ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ಆಗುತ್ತೆ. ಆ ನಿಮಿತ್ಯ ನಾನು ಇವತ್ತು ಈ ಸಭೆ ಮಾಡಿದ್ದೇನೆ.  2013 ರಲ್ಲಿ ನಾನು ಸಿಎಂ ಸಹೋದರಂತೆ ಕೆಲಸ ಮಾಡಿ ಚುನಾವಣೆ ಗೆದ್ದಿದ್ದೇವೆ. ನಾವು ಪ್ರಣಾಳಿಕೆಯಂತೆ ಸ್ವಚ್ಛ ಆಡಳಿತ ಕೊಟ್ಟಿದ್ದೇವೆ ‘

‘ ಸಿದ್ದರಾಮಯ್ಯನವರಂತಹ ಸಮರ್ಥ ನಾಯಕನ್ನ ಕೊಟ್ಟಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ಎಲ್ಲಾ ಭರವಸೆಗಳನ್ನ ಈಡೇರಿಸಿ ನಿಮ್ಮ ಬಳಿ ಮತ್ತೆ ಮತ ಕೇಳಲು ಬರುತ್ತೆವೆ. ಮೋದಿಯವರೆ ಸಾಲ ಮನ್ನಾ ಮಾಡಿ ಎಂದು ಸಿಎಂ ಕೇಳಿದ್ರು. ನೀವ್ ಮಾಡಲಿಲ್ಲ. ಇಲ್ಲಿನ ಬಿಜೆಪಿಯವರು ಪ್ರಧಾನಿಗಳಿಗೆ ಕೇಳಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ೧.೫೦ ಲಕ್ಷ ಸರ್ಕಾರಿ ಉಧ್ಯೋಗ ನೀಡಿದ್ದೆವೆ. ಮೋದಿ ಸರ್ಕಾರ ಎಷ್ಟು ಜನರಿಗೆ ಉಧ್ಯೋಗ ನೀಡಿದೆ…? ಶೆಟ್ಟರ್ ಈ ಭಾಗದ ಸಿಎಂ ಆಗಿದ್ದವರು ಆದ್ರೆ ಹುಬ್ಬಳ್ಳಿ- ಧಾರವಾಡ ಯಾವುದೇ ಕೆಲಸ ಮಾಡಿಲ್ಲ. ಐಐಟಿಯನ್ನ ಇದೇ ಶೆಟ್ಟರ್ ಸಿಎಂ ಆಗಿದ್ದಾಗ ರಾಯಚೂರಿಗೆ ಮಾಡಿದ್ದರು. ಈಗ ನಾವು ಮಾಡಿದ್ದೇವೆ ಎಂದು ಜೋಶಿ ಹಾಗೂ ಶೆಟ್ಟರ್ ಹೇಳಿಕೊಂಡು ತಿರಗಾಡುತ್ತಾರೆ. ಬಿಜೆಪಿಯವರು ೫ ವರ್ಷದಲ್ಲಿ ಏನು ಮಾಡಿದ್ದಾರೆ ಎನ್ನುವುದನ್ನ ಪಟ್ಟಿ ನೀಡಲಿ. ನಾವು ನಮ್ಮ ಸಿದ್ದಣ್ಣವರು ಮಾಡಿದ್ದನ್ನು ಜನರ ಮುಂದೆ ಇಡುತ್ತೇವೆ. ಬಸವಣ್ಣನ ತ್ವತ್ವದಡಿಯಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ‘

‘ ಯುಪಿಯ ಸರ್ಕಾರ ಜಿಎಸ್ ಟಿ ತರೋದಕ್ಕೆ ಹೊರಟಿತ್ತು. ಆವತ್ತು ಇದೇ‌ ಮೋದಿ ಜಿಎಸ್ ಟಿ ಆಧಾರ್ ಬಗ್ಗೆ ವಿರೋದ ಮಾಡಿದ್ದರು. ಇವತ್ತು ಅದೇ ಯೋಜನೆಗಳನ್ನ ತಂದಿದ್ದಾರೆ. ಕಪ್ಪು ಹಣ ತಂದು ಜನರಿಗೆ ಹಂಚ್ತಿನಿ ಅಂದ್ರಿ ಅದು ಎಲ್ಲಿ ಹೋಯಿತು. ಕಪ್ಪು ಹಣ ತಡೆಗಟ್ಟುದಕ್ಕೆ ನೋಟ್ ಬ್ಯಾನ್ ಮಾಡಿದ್ರಿ. ಆದ್ರೆ ಇವತ್ತು ಎಷ್ಟು ಹಣ ಹಿಡಿದ್ರಿ ಅಂದ್ರೆ ನಿಮ್ಮಲಿ ಲೆಕ್ಕ ಇಲ್ಲ ‘

‘ ನಮ್ಮ ಇಂದಿರಾ ಕ್ಯಾಂಟೀನ್ ಪ್ರತಿನಿತ್ಯ ೩ ಲಕ್ಷ ಜನ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ ‘ ಎಂದು ಹುಬ್ಬಳ್ಳಿಯ ಕಾಂಗ್ರೆಸ್ ಸಮಾವೇಶದಲ್ಲಿ ಜಿ ಪರಮೇಶ್ವರ ಹೇಳಿಕೆ ನೀಡಿದ್ಧಾರೆ.

Comments are closed.