ನಿರ್ಭಯಾ ಪ್ರಕರಣದ ದೋಷಿ ಪವನ್ ಗುಪ್ತಾ ಸಲ್ಲಿಸಿದ್ದ ಪರಿಶೀಲನಾ ಅರ್ಜಿ ವಜಾ…

ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಪವನ್ ಗುಪ್ತಾ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಗಳಿಗೆ ಫೆ.1 ರಂದು ಬೆಳಗ್ಗೆ ಆರು ಗಂಟೆಗೆ ಗಲ್ಲುಶಿಕ್ಷೆಯ ಡೆತ್ ವಾರೆಂಟ್ ಹೊರಡಿಸಲಾಗಿದೆ. ಈ ನಡುವೆ, ಪ್ರಕರಣದ ನಾಲ್ವರು ದೋಷಿಗಳು ಗಲ್ಲುಶಿಕ್ಷೆ ವಿಳಂಬಕ್ಕೆ ಇರುವ ಮಾರ್ಗಗಳನ್ನು ಒಂದೊಂದಾಗಿ ಬಳಸಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರೇ ಸರದಿಯಂತೆ ಕೋರ್ಟ್ ಮೆಟ್ಟಿಲೇರುತ್ತಿದ್ದು, ಶಿಕ್ಷೆ ವಿಳಂಬಕ್ಕೆ ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ.

ಈ ನಡುವೆ, ದೋಷಿ ಪವನ್ ಗುಪ್ತ ನಿರ್ಭಯಾ ಪ್ರಕರಣದ ವೇಳೆ ತಾನು ಬಾಲಾಪರಾಧಿಯಾಗಿದ್ದೆ ಎಂದು ಸುಪ್ರೀಂಕೋರ್ಟ್ ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ…