ಸಮುದ್ರದಡಕ್ಕೆ ಅಪ್ಪಳಿಸಿತು ‘ಪೆನ್ನಿಸ್ ಫಿಶ್’ : ತಿನ್ನೋಕೆ ಮುಗಿಬಿದ್ದ ಜನ

ಅಲ್ಲಿನ ಜನರು ಅಪರೂಪದ ಪೆನ್ನಿಸ್ ಫಿಶ್ ತಿನ್ನೋಕೆ ಮುಗಿಬಿದ್ದಿದ್ದು, ಅಚ್ಚರಿಗೆ ಕಾರಣರಾಗಿದ್ದಾರೆ.
ನೋಡಲು ವಿಶೇಷವಾಗಿ ಕಾಣುವ ‘ಪೆನ್ನಿಸ್ ಫಿಶ್’ ಅಮೆರಿಕದ ಕ್ಯಾಲಿಫೋರ್ನಿಯಾದ ಡ್ರೇಕ್ಸ್ ಬೀಚ್‍ಗೆ ಸಾವಿರಾರು ಸಂಖ್ಯೆಯಲ್ಲಿ ಅಪ್ಪಳಿಸಿದ್ದು, ಅಲ್ಲಿನ ಜನರನ್ನು ಅಚ್ಚರಿಗೊಳಪಡಿಸಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಇವುಗಳನ್ನು ನೋಡಿದ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಮುದ್ರದ ಆಳದಲ್ಲೆ ಹೆಚ್ಚಾಗಿರೋ ಪೆನ್ನಿಸ್ ಫಿಶ್ ನೋಡೋಕೆ ಸೇಮ್ ಟು ಸೇಮ್ ಪುರುಷರ ಗುಪ್ತಾಂಗದ ಆಕೃತಿಯನ್ನೇ ಹೋಲುತ್ತದೆ. ಹೀಗಾಗಿಯೇ ಇನ್ ಕೀಪರ್ ಎನ್ನೋ ಹೆಸರಿನ ಫಿಶ್ ಗಳಿಗೆ ಪೆನ್ನಿಸ್ ಫಿಶ್ ಅಂತಾ ಕರೆಯಲಾಗ್ತಿದೆ.
ಚಂಡಮಾರುತದಿಂದಾಗಿ ಸಾವಿರಾರು ಪೆನ್ನಿಸ್ ಫಿಶ್ ಗಳು ಕ್ಯಾಲಿಪೋರ್ನಿಯಾದಲ್ಲಿರೋ ಬೀಚ್ ದಂಡೆಗೆ ಬಂದು ಬಿದ್ದಿವೆ. ಇವುಗಳನ್ನು ನೋಡಲು ಹಾಗೂ ತಿನ್ನಲು ಅಲ್ಲಿನ ಜನರು ಮುಗಿಬಿದ್ದಿದ್ದಾರೆ.

Leave a Reply

Your email address will not be published.