‘ಪ್ರಕೃತಿ ವಿಕೋಪದಿಂದ ನೆಲಸಮವಾದ ಮನೆಗಳ ಮರು ನಿರ್ಮಾಣ’- ಪಿಣರಾಯ್ ವಿಜಯನ್

ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ ಉಂಟಾದ ಜಲಪ್ರಳಯದಲ್ಲಿ 13, 362 ಮನೆಗಳು ನೆಲಸಮವಾಗಿದ್ದು, 9, 341 ಕುಟುಂಬಗಳಿಗೆ ಮೊದಲ ಹಂತದಲ್ಲಿ ಮನೆ ನಿರ್ಮಾಣಕ್ಕೆ ಹಣ ನೀಡಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಒಟ್ಟು 2,55,964 ಹಾನಿಗೊಳಗಾದ ಮನೆಗಳನ್ನು ನಾಲ್ಕು ವಿಧದಲ್ಲಿ ವಿಂಗಡಿಸಿದೆ. 1,27,781 ಮನೆಗಳಿಗೆ ಶೇ.15 ರಷ್ಟು ಹಾನಿಯಾದರೆ, 63,307 ಮನೆಗಳಿಗೆ ಶೇ.16 ರಿಂದ 29 ಹಾನಿಯಾಗಿದೆ. 35,446 ಮನೆಗಳಿಗೆ ಶೇ.30 ರಿಂದ 59 ರಷ್ಟುನಷ್ಟವಾಗಿದ್ದು, 16,068 ಮನೆಗಳು ಶೇ. 60 ರಿಂದ 70 ರಷ್ಟ ಹಾನಿಯಾಗಿದ್ದು, 13,362 ಮನೆ ಸಂಪೂರ್ಣ ನೆಲಸಮವಾಗಿವೆ.

ಹಾನಿಗೊಳಗಾದ 2,55,964 ಪೈಕಿ, ಸದ್ಯ 1,30,606 ಮನೆಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗಿದೆ. 6,87,843 ಕುಟುಂಬಗಳಿಗೆ 10 ಸಾವಿರ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.  

Leave a Reply