ರಮೇಶ ಜಾರಕಿಹೊಳಿ‌ ರಾಜೀನಾಮೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಹ್ಲಾದ‌ ಜೋಶಿ…

ರಮೇಶ ಜಾರಕಿಹೊಳಿ‌ ರಾಜೀನಾಮೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ‌ ಜೋಶಿ,  ಅದು ನನ್ನ ಗಮನಕ್ಕೆ ಬಂದಿಲ್ಲ. ಇತ್ತೀಚೆಗೆ ರಮೇಶ ಜಾರಕಿಹೊಳಿ ನನ್ನ ಭೇಟಿ ಕೂಡ ಆಗಿದ್ದಾರೆ. ಯಾವುದೇ ಉಹಾಪೋಹಗಳಿಗೆ ಅರ್ಥವಿಲ್ಲ. ಪಕ್ಷಕ್ಕೆ ಬದ್ಧವಾಗಿ ಇರುವುದಾಗಿ ನಮಗೆ ಹೇಳಿದ್ದಾರೆ ಎಂದಿದ್ದಾರೆ.

ಸಿ.ಟಿ. ರವಿ ಕ್ಯಾಸಿನೋ ಆರಂಭ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾವ ಹಿನ್ನೆಲೆಯಲ್ಲಿ ಹಾಗೇ ಹೇಳಿದ್ದಾರೆ ಗೊತ್ತಿಲ್ಲ. ನೀರಾ ಬಾರ್‌ದಂತಹ ಹೊಸ ಚಟ ಹಚ್ಚಿಸುವ ಕೆಲಸ ಮಾಡಬಾರದು. ಕ್ಯಾಸಿನೋ ನಮ್ಮಲ್ಲಿ ಬರೋದು ಬೇಡ. ಗೋವಾದಲ್ಲಿ ಇದೇ ಅಲ್ಲೇ ಇರಲಿ. ಪ್ರವಾಸೋದ್ಯಮಕ್ಕಾಗಿ ಯಾರನ್ನೂ ಚಟಗಾರರನ್ನಾಗಿ ಮಾಡಬಾರದು. ನಾನು ಅವರಿಗೆ ತಿಳವಳಿಕೆ ಹೇಳುವೆ.

ಧಾರವಾಡದಲ್ಲಿ ವಿಕಲಚೇತನ ಯುವತಿ ಆತ್ಮಹತ್ಯೆ ವಿಚಾರ ಮಾತನಾಡಿ, ಮಹಿಳೆ ಆತ್ಮಹತ್ಯೆ ಬಗ್ಗೆ ನನಗೂ ಅನುಕಂಪ‌ ಇದೆ. ಆ ರೀತಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಅನ್ಯಾಯವಾಗಿದ್ದರೇ ಮೇಲಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಯಾರೋ‌ ಆತ್ಮಹತ್ಯೆ ಮಾಡಿಕೊಳ್ಳತಾರೆ ಅಂತಾ ಪರಿಹಾರ ಹೆಚ್ಚಳ ಮಾಡೋದಕ್ಕೆ ಆಗೋದಿಲ್ಲ. ಇದರಿಂದ ಅಧಿಕಾರಿಗಳು ಹೆದರಿ ಕೆಲಸ ಮಾಡಬೇಕಾಗುತ್ತೆ. ಎಲ್ಲ ರೀತಿಯ ಅನುಕಂಪ ವ್ಯಕ್ತಪಡಿಸಿ ನಾನು ಈ ರೀತಿ ಹೇಳುವೆ.

ಅಮೂಲ್ಯ ಹೇಳಿಕೆಗೆ ಡಿಕೆಶಿ ಬೆಂಬಲ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಪಾಕ್ ಗೆದ್ದಾಗ ಪಟಾಕಿ ಹಾರಿಸಿದವರ ಬಗ್ಗೆ ಕಾಂಗ್ರೆಸ್ ಹುಡುಗರು ಮಾಡಿದ್ದಾರೆ ಬಿಡಿ ಅಂತಿದ್ರು. ಸಿಎಎ ಇಟ್ಟುಕೊಂಡು ಒಂದು ಕೋಮಿನ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇದರಿಂದ ಪಾಕ್ ಜಿಂದಾಬಾದ್ ಅಂದ್ರೆ ನಡೆಯುತ್ತೆ ಅನಿಸುತ್ತಿದೆ. ನಕ್ಸಲ್‌ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ತೃಣಮೂಲ ಕಾಂಗ್ರೆಸ್ ನಕ್ಸಲ್ ಜೊತೆ ಹೊಂದಾಣಿಕೆ ಮಾಡಿಕೊಂಡೇ ಚುನಾವಣೆ ಗೆದ್ದಿದ್ದಾರೆ. ಇದೇ ಕಾರಣಕ್ಕೆ ಡಿಕೆಶಿಯಂತಯವರು ಇದನ್ನು ಬೆಂಬಲಿಸಿರಬೇಕು. ಪಾಕ್‌ ಜಿಂದಾಬಾದ್ ಎನ್ನುವವರನ್ನು ಈಗ ಯಾರೂ ಮುಕ್ತವಾಗಿ ಬೆಂಬಲಿಸುತ್ತಿಲ್ಲ. ಬಿಜೆಪಿ, ಆರ್.ಎಸ್.ಎಸ್. ನ ಶ್ರಮದಿಂದ ಇಂದು ರಾಷ್ಟ್ರೀಯತೆ ಜಾಗೃತಗೊಂಡಿದೆ ಎಂದಿದ್ದಾರೆ.