ಇಂದಿನಿಂದಲೇ ಪೆಟ್ರೋಲ್ ದರ ರೂ 3.77/ಲೀ, ಡೀಸೆಲ್ ರೂ 2.91/ಲೀ ಕಡಿಮೆ

ಎಲ್ಲಾ ವಸ್ತುಗಳ ಬೆಲೆಯೇರಿಕೆಯಾಗ್ತಿರುವಾಗ ಬರಗಾಲದಲ್ಲಿ ಮಳೆ ಸುರಿದಂಥಾ ಸುದ್ದಿಯೊಂದು ಜನರಿಗೆ ಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ದೊಡ್ಡ ಪ್ರಮಾಣದ ಕಡಿತ ಮಾಡಲಾಗಿದೆ.

ಪ್ರತೀ ಲೀಟರ್ ಪೆಟ್ರೋಲ್ ಗೆ 3.77 ರೂಪಾಯಿ ಮತ್ತು ಪ್ರತೀ ಲೀಟರ್ ಡೀಸೆಲ್ ಗೆ 2.91 ರೂಪಾಯಿಯಷ್ಟು ದರ ಕಡಿತಗೊಂಡಿದೆ. ಈ ಪರಿಷ್ಕೃತ ದರ ಇಂದು ಮಧ್ಯರಾತ್ರಿ 12ರಿಂದಲೇ ಚಾಲನೆಗೆ ಬರಲಿದೆ. ಬೆಲೆ ಇಳಿಕೆಯಿಂದಾಗಿ ನಾಗರಿಕರು ಒಂದಷ್ಟು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಜೊತೆಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿರುವುದರಿಂದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳಲ್ಲಿ ಈ ಮಟ್ಟದ ಇಳಿಕೆ ಕಂಡುಬಂದಿದೆ.

ಸಾಕಷ್ಟು ಸಮಯದಿಂದ ಕೇವಲ ಬೆಲೆಯೇರಿಕೆಯ ಸುದ್ದಿಗಳನ್ನೇ ಕೇಳುತ್ತಿದ್ದ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಇಳಿಕೆ ಸಂತಸದ ಸುದ್ದಿಯಾಗಿ ಕೇಳಿಬಂದಿದೆ. ಇಷ್ಟರಮಟ್ಟಿಗೆ ಜನರ ಮೇಲಿನ ಹೊರೆ ಕಡಿಮೆಯಾಗಿದ್ದಕ್ಕೆ ಜನ ಖುಷಿ ವ್ಯಕ್ತಪಡಿಸ್ತಿದ್ದಾರೆ.

Comments are closed.