Cricket : ಪೃಥ್ವಿ, ರಹಾನೆ, ಪಂತ್ ಅರ್ಧಶತಕ – ಉತ್ತಮ ಮೊತ್ತದತ್ತ ಟೀಮ್ ಇಂಡಿಯಾ

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಸ್ಥಿತಿಯನ್ನು ತಲುಪಿದೆ. ವೆಸ್ಟ್ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 312 ಕ್ಕೆ ಆಲೌಟ್ ಆಯಿತು. ಭಾರತದ ಪರವಾಗಿ ಉಮೇಶ್ ಯಾದವ್ 6 ವಿಕೆಟ್ ಪಡೆದರು.

ಶನಿವಾರ ನಡೆದ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾದ ಮೂವರು ಬ್ಯಾಟ್ಸಮನ್ ಗಳು ಅರ್ಧಶತಕ ಬಾರಿಸಿದರು. ಆರಂಭಿಕ ಬ್ಯಾಟ್ಸಮನ್ ಪೃಥ್ವಿ ಷಾ 70 ರನ್ ಗಳಿಸಿ ಔಟಾದರೆ, ಅಜಿಂಕ್ಯ ರಹಾನೆ 75 ಹಾಗೂ ರಿಷಭ್ ಪಂತ್ 85 ರನ್ ಗಳಿಸಿ ನಾಟೌಟ್ ಆಗುಳಿದಿದ್ದಾರೆ. ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡ ಕೆ.ಎಲ್ ರಾಹುಲ್ 4 ರನ್ ಗಳಿಸಿ ನಿರ್ಗಮಿಸಿದರು.

ಎರಡನೇ ದಿನದಾಟದ ಅಂತ್ಯದ ವೇಳೆಗೆ ಭಾರತ 4 ವಿಕೆಟ್ ನಷ್ಟಕ್ಕೆ 308 ರನ್ ಸೇರಿಸಿದೆ. ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ ವಿಂಡೀಸ್ ಗಿಂತ ಇನ್ನೂ 4 ರನ್ ಹಿನ್ನಡೆಯಲ್ಲಿದೆ.

Leave a Reply