PUBG ಗೇಮ್ ಪ್ರೀಯರೇ ಎಚ್ಚರ.. ಎಚ್ಚರ.. ಎಚ್ಚರ.. : ಮಾನಸಿಕನಾದ ಯುವಕ!

PUBG ಗೇಮ್ ಪ್ರೀಯರೇ ಎಚ್ಚರ…! ಎಚ್ಚರ…! ಎಚ್ಚರ…! ಪಬ್ ಜೀ ಗೇಮ್ ನಿಂದ ಯುವಕನೊಬ್ಬ ಮಾನಸಿಕ ಸಮತೋಲನ ಕಳೆದುಕೊಂಡ ಘಟನೆ ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ.

ಪಬ್ ಜಿ ಗೇಮ್ ನಲ್ಲಿ ವಾಹನ ಹಾಗೂ ಮನೆಗಳಿಗೆ ಬಾಂಬ್ ಎಸೆಯುವಂತೆ ಈ ಯುವಕ ಕೂಡ ಎಲ್ಲರ ಮೇಲೂ ಕಲ್ಲು ಎಸೆಯುತ್ತಿರುವುದು ಕಂಡು ಬಂದಿದೆ. ರಸ್ತೆಯಲ್ಲಿ ಬರುವ ಸಾರ್ವಜನಿಕ ಹಾಗೂ ವಾಹನಗಳ ಮೇಲೆ ಕಲ್ಲು ಎಸೆಯುತ್ತಿರುವುದರ ಬಗ್ಗೆ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದಾರೆ.

ಪಬ್ ಜಿ ಯುವಕನ ಕೈ ಕಾಲು ಕಟ್ಟಿ ಹಾಕಿ ಬಂಧಿಸುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.  ನಂತರ 108 ನಲ್ಲಿ ಹಾಕಿ ಸಾರ್ಜವನಿಕರು ಕಳುಹಿಸಿದ್ದಾರೆ. ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯುವಕನ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಹುಚ್ಚನಂತೆ ವರ್ತಿಸುತ್ತಿರುವ ಯುವಕನನ್ನು ಕಂಡು ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ಹಾಗೂ ಸಾರ್ವಜನಿಕ ನಡುವೆ ವಾಗ್ವಾದ ನಡೆದಿದೆ.