‘ಕೊಹ್ಲಿ ರೀತಿ ಅತ್ಯುತ್ತಮ ಆಟವಾಡಬಲ್ಲ ಆಟಗಾರ ರಾಹುಲ್‌’ – ಗೇಲ್‌

ವಿರಾಟ್‌ ಕೊಹ್ಲಿ ಬಳಿಕ ಭಾರತೀಯ ಕ್ರಿಕೆಟ್‌ನ ಸೂಪರ್‌ ಸ್ಟಾರ್‌ ಆಗಿ ಪ್ರಜ್ವಲಿಸುವ ಸಾಮರ್ಥ್ಯ ಕರ್ನಾಟಕದ ಕೆ.ಎಲ್‌.ರಾಹುಲ್‌ಗಿದೆ ಎಂದು ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್‌ ಗೇಲ್‌ ಅಭಿಪ್ರಾಯಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಗೇಲ್‌, ‘ಕೊಹ್ಲಿ ರೀತಿ ಅತ್ಯುತ್ತಮ ಆಟವಾಡಬಲ್ಲ ಆಟಗಾರ ಎಂದರೆ ನನಗೆ ತಕ್ಷಣಕ್ಕೆ ನೆನಪಾಗುವುದು ರಾಹುಲ್‌. ಅವರಲ್ಲಿ ಆ ಪ್ರತಿಭೆ, ಸಾಮರ್ಥ್ಯವಿದೆ. ಆದರೆ ಅವರು ಒತ್ತಡಕ್ಕೆ ಸಿಲುಕದೆ, ತಮ್ಮ ಆಟದ ಕಡೆ ಹೆಚ್ಚು ಗಮನ ಹರಿಸುತ್ತಾ, ಯಾರೊಂದಿಗೂ ಪೈಪೋಟಿಗೆ ಬೀಳದೆ ಆಡಬೇಕಷ್ಟೆ’ ಎಂದು ಹೇಳಿದ್ದಾರೆ. ರಾಹುಲ್‌ ಹಾಗೂ ಗೇಲ್‌ ಸದ್ಯ ಐಪಿಎಲ್‌ನಲ್ಲಿ ಪಂಜಾಬ್‌ ತಂಡದ ಪರ ಆಡುತ್ತಿದ್ದಾರೆ.

ಕೆ.ಎಲ್ ರಾಹುಲ್ 12ನೇ ಆವತ್ತಿಯ ಐಪಿಎಲ್’ನಲ್ಲಿ ಇದುವರೆಗೂ 12 ಪಂದ್ಯಗಳನ್ನಾಡಿ 57ರ ಸರಾಸರಿಯಲ್ಲಿ 1 ಶತಕ ಮತ್ತು 5 ಅರ್ಧಶತಕ ಸಹಿತ 520 ರನ್ ಬಾರಿಸಿದ್ದು, ಪ್ರಸ್ತುತ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಸನ್’ರೈಸರ್ಸ್ ವಿರುದ್ಧ 56 ಎಸೆತಗಳಲ್ಲಿ 79 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

Leave a Reply