ರಾಹುಲ್ ಗೆ ವಯಸ್ಸು ಮೀರುತ್ತಿದೆ, ಬೇಗ ಮದ್ವೆ ಮಾಡಿಸಿ ಸಿದ್ದರಾಮಯ್ಯನವರೇ : ಸಿ.ಟಿ ರವಿ

ರಾಹುಲ್ ಮದುವೆ ವಿಚಾರವಾಗಿ ಮಾತನಾಡಿದ ಸಿ ಟಿ ರವಿ, ನೈತಿಕತೆಗೂ ಮತ್ತು ನೆಹರು ಕುಟುಂಬಕ್ಕೂ ಸಂಬಂದವಿಲ್ಲ. ಮೌಂಟ್ ಬ್ಯಾಟನ್ ಸಂಬಂದದಿಂದಲೇ ದೇಶದಲ್ಲಿ ಏನಾಯ್ತು ಅನ್ನೋದು ಎಲ್ಲರಿಗೂ ಗೊತ್ತು. ರಾಹುಲ್ ಗಾಂಧಿಗೆ ಮದುವೆ ವಯಸ್ಸು ಮೀರುತ್ತಿದೆ. ಕಾರಜೋಳರ ಈ ಆಫರ್ ಬಿಟ್ಟರೆ ರಾಹುಲ್ ಗೆ ಇಂತಹ ಅವಕಾಶ ಸಿಗೋದಿಲ್ಲ. ಆದರೆ ಕಾರಜೋಳ ಆಫರ್ ಗೆ ರಾಹುಲ್ ಕುಟುಂಬದಲ್ಲೆ ಅಪಸ್ವರ ಇದೆ. ರಾಹುಲ್ ಗೆ ಇದು ಕಡೆಯ ಅವಕಾಶ. ಇದಕ್ಕೆ ಸಿಎಂ ಸಿದ್ದರಾಮಯ್ಯ ಮದ್ಯಸ್ಥಿಕೆ ವಹಿಸಲಿ ‘ ಎಂದು ಸಿ ಟಿ ರವಿ ಹೇಳಿದ್ದಾರೆ.

Image result for rahul gandhi marriage
ಲಿಂಗಾಯತ ಧಮ೯ದ ವಿಚಾರವಾಗಿ ಮಾತನಾಡಿ ‘ ಯಾರೂ ಏನೇ ಪ್ರಯತ್ನ ಮಾಡಿದ್ರೂ ವೀರಶೈವರನ್ನ, ಲಿಂಗಾಯತರನ್ನ ಹಿಂದುತ್ವದಿಂದ ದೂರ ಮಾಡಲು ಸಾಧ್ಯವಿಲ್ಲ. ಜನಿವಾರ, ಶಿವದಾರ ಏನೆ ಹಾಕಲಿ ಎಲ್ಲರೂ ಹಿಂದುಗಳೇ. ಒಂದೊಮ್ಮೆ ಹಿಂದುತ್ವದಿಂದ ದೂರ ಉಳಿದಲ್ಲಿ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಯಡಿಯೂರಪ್ಪ ರನ್ನ ಸಿಎಂ ಆಗದಂತೆ ನೋಡಿಕೊಳ್ಳಲು ಸಿದ್ದರಾಮಯ್ಯ ಲಿಂಗಾಯತ ವಿಚಾರ ಹರಿಬಿಟ್ಟಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಯಶಸ್ಸು ಕಾಣಲು ಸಾಧ್ಯವಿಲ್ಲ ‘ ಎಂದು ಬಾಗಲಕೋಟೆಯಲ್ಲಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

Comments are closed.