ಹೈಕಮಾಂಡ್ ಬೋನಿಗೆ ರಾಜಾಹುಲಿ : ಸಿಎಂ ಬಿಎಸ್ವೈಗೆ ಎಸ್ ಆರ್ ಪಾಟೀಲ್ ವ್ಯಂಗ್ಯ..

ಬಿಜೆಪಿ ಹೈಕಮಾಂಡ್ ನವ್ರು ರಾಜಾಹುಲಿಯನ್ನು ಬೋನಿನಿಂದ ಹೊರಬಿಡುತ್ತಿಲ್ಲ.ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುತ್ತೆ ಎಂದು ಜನ ಮಾತನಾಡ್ತಿದ್ರು. ಯಾಕೆ ಬಿಎಸ್ವೈ ಮರ್ಜಿ ಕಾಯಿತ್ತಿದ್ದಾರೆ ನನಗೆ ಗೊತ್ತಿಲ್ಲ. ಬಿಎಸ್ವೈ ಗೆ ರಾಜಾಹುಲಿ ಎಂದು ಕರೆಯುತ್ತಾರೆ. ಅವರು ಹಿರಿಯರಿದ್ದಾರೆ.ನನಗೂ ಗೌರವವಿದೆ ಎಂದು ಸಚಿವ ಸಂಪುಟ ಪುನಾರಚನೆ ವಿಚಾರದಲ್ಲಿ ಹೈಕಮಾಂಡ್ ಬಿಎಸ್ವೈ ರಾಜಾಹುಲಿಯನ್ನು ಕಟ್ಟಿಹಾಕ್ತಿರೋದಕ್ಕೆ ಬಾಗಲಕೋಟೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ವ್ಯಂಗ್ಯವಾಡಿದ್ರು.

ಬಾಗಲಕೋಟೆ ನವನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಎಸ್ ಆರ್ ಪಾಟೀಲ್ ಮಾತನಾಡಿದ್ರು.

ನಿಜಲಿಂಗಪ್ಪನವರ ಹಾಗೆ ಬಿ ಎಸ್ ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆಗಿದ್ದಾರೆ.ಬಿಎಸ್ವೈ ಕೆಲಸ ಮಾಡೋದಕ್ಕೆ ಹೈಕಮಾಂಡ್ ಅವಕಾಶ ಕಲ್ಪಿಸ್ತಿಲ್ಲ.ಬಿಎಸ್ವೈ ಸಲುವಾಗಿ ನಾನು ಮರುಕ ಪಡೋದಿಲ್ಲ‌‌.ರಾಜ್ಯದ ಜನತೆ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯವರು ಬೇಗನೇ ಮಂತ್ರಿಮಂಡಲ ರಚನೆ ಮಾಡ್ಬೇಕೆಂದು ಆಗ್ರಹಿಸಿದ್ರು.ಇನ್ನು ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಹೇಳಿದ್ದ ಸಿದ್ದರಾಮಯ್ಯ ಹೇಳಿಕೆಯನ್ನು ಅಧಿವೇಶನದಲ್ಲಿ ಚರ್ಚೆ ಮಾಡ್ತೀವಿ ಎಂದು ಬಿಎಸ್ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಸ್ ಆರ್ ಪಾಟೀಲ್, ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲ ಎಂದು ನನಗೂ ಅನಿಸಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹೇಳಿಕೆಯನ್ನು ಎಸ್ ಆರ್ ಪಾಟೀಲ್ ಬೆಂಬಲಿಸಿದ್ರು.

ಕೆಳಮನೆ, ಮೇಲ್ಮನೆ ೩೦೦ಶಾಸಕರಿದ್ದೇವೆ.ವರ್ಷಕ್ಕೆ ೨ಕೋಟಿ ಪ್ರದೇಶಾಭಿವೃದ್ಧಿ ನಿಧಿ ಕೊಡ್ಬೇಕು.೨೦೧೯-೨೦ನೇ ಸಾಲಿನ ಹಣಕಾಸು ವರ್ಷ ಈಗಾಗಲೆ ೧೦ ತಿಂಗಳು ಗತಿಸಿ ಹೋಗಿದೆ.ಹಣಕಾಸು ವರ್ಷ ಮುಗಿಯೋದಕ್ಕೆ ಎರಡು ತಿಂಗಳು ಉಳಿದಿದೆ.ಶಾಸಕರ ಪ್ರದೇಶಾಭಿವೃದ್ಧಿ ನಿಧಿ ೨ಕೋಟಿಯಲ್ಲಿ೫೦ಲಕ್ಷ ಮಾತ್ರ ಕೊಟ್ಟಿದ್ದಾರೆ.೧ಕೋಟಿ ೫೦ಲಕ್ಷ ಹಣ ೩೦೦ಶಾಸಕರಿಗೂ ಇನ್ನೂ ಕೊಟ್ಟಿಲ್ಲ.೨೦೧೮-೧೯ನೇ ಸಾಲಿನ ೩೯ಲಕ್ಷ ಹಣ ಇನ್ನು ಬಂದಿಲ್ಲ.ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅನ್ನೋದಕ್ಕೆ ಇದೊಂದೇ ಸಾಕಲ್ಲವೇ!?ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎಂದು ಹೇಳುವ ಮೂಲಕ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಎಸ್ ಆರ್ ಪಾಟೀಲ್ ಪರೋಕ್ಷವಾಗಿ ಹೇಳಿಕೆ ನೀಡಿದ್ರು‌.ಈ ಬಗ್ಗೆ ಅಧಿವೇಶನದಲ್ಲಿ ಸರ್ಕಾರಕ್ಕೆ ಸರಿಯಾಗಿ ಉತ್ತರ ಕೊಡುತ್ತೇವೆಂದ್ರು..