ನಾನ್ ಬೇಲೆಬಲ್ ವಾರಂಟ್ ಜಾರಿ ವಿಚಾರಕ್ಕೆ ಸ್ಪಷ್ಟನೆ ಕೊಟ್ಟ ರಕ್ಷಿತ್ ಶೆಟ್ಟಿ …

ರಕ್ಷಿತ್ ಶೆಟ್ಟಿ ಬಂಧನಕ್ಕೆ 9ನೇ ಎಸಿಎಂಎಂ ಕೋರ್ಟ್ ನಾನ್ ಬೇಲೆಬಲ್ ವಾರಂಟ್ ಜಾರಿ ಮಾಡಿದ ವಿಚಾರ ಸಾಕಷ್ಟು ಸುದ್ದಿಯಾಘುತ್ತಿದ್ದಂತೆ ರಕ್ಷಿತ್ ಶೆಟ್ಟಿ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

2016ರಲ್ಲಿ ರಿಲೀಸ್ ಆದ ಕಿರಿಕ್ ಪಾರ್ಟಿ ಚಿತ್ರದಲ್ಲಿ `ಹೇ ಹೂ ಆರ್ ಯೂ’ ಹಾಡಿನಲ್ಲಿ `ಶಾಂತಿ ಕ್ರಾಂತಿ’ ಚಿತ್ರದ `ಮಧ್ಯರಾತ್ರೀಲಿ’ ಮ್ಯೂಸಿಕ್ ಬಳಕೆ ವಿಚಾರಕ್ಕೆ
ಲಹರಿ ಮ್ಯೂಸಿಕ್ ಬಳಿಯಿದ್ದ ಆಡಿಯೋ ರೈಟ್ಸ್ ಅವ್ರ ಅನುಮತಿ ಪಡೆಯದೇ ಮ್ಯೂಸಿಕ್ ಬಳಕೆ ಮಾಡಲಾಗಿದೆ ಎಂದು ಹರಿ ಆಡಿಯೋ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು.

ಇದೇ ಫೆ. 20ರಂದು ಸಮನ್ಸ್ ಜಾರಿ ಮಾಡಿದ್ದ ಕೋರ್ಟ್ಗೆ ಉತ್ತರಿಸದ ರಕ್ಷಿತ್ ಶೆಟ್ಟಿಗೆ ನಾನ್ ಬೈಲೆಬಲ್ ವಾರೆಂಟ್ ಜಾರಿ ಮಾಡಲಾಗಿದೆ.
ಎ1 ಆರೋಪಿ ಪರಮ್‍ವಾಹ್ ಸ್ಟುಡಿಯೋಸ್, ಎ2 ಆರೋಪಿ ರಕ್ಷಿತ್ ಶೆಟ್ಟಿ ಹಾಗೂ ಎ3 ಆರೋಪಿ ಕಿರಿಕ್ ಪಾರ್ಟಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ವಿರುದ್ಧ ನಾನ್ ಬೈಲೆಬಲ್ ವಾರೆಂಟ್ ಜಾರಿ ಮಾಡಲಾಗಿದೆ.

ತಮ್ಮ ಬಂಧನ ಭೀತಿ ಕುರಿತಂತೆ ಹರಡುತ್ತಿರುವ ವರದಿಗಳು ಸತ್ಯಕ್ಕೆ ದೂರ. ಈ ಪ್ರಕರಣ ಈ ಹಿಂದೆಯೇ ಇತ್ಯರ್ಥವಾಗಿದೆ. ಈಗಾಗಲೇ ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ನಾವು ಗೆದ್ದಿದ್ದೇವೆ. ಹೀಗಿರುವಾಗ ಇದೇ ವಿವಾದದಲ್ಲಿ ಮತ್ತೊಂದು ಪ್ರಕರಣ ದಾಖಲಿಸುವ ಔಚಿತ್ಯವೇನಿದೆ? ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ರಕ್ಷಿತ್ ಪ್ರಶ್ನಿಸಿದ್ದಾರೆ.